ಗುರುವಾರ , ಜನವರಿ 27, 2022
27 °C
ಕ್ರಿಕೆಟ್‌: ಬೆಳಗಾವಿ ತಂಡಗಳ ಪ್ರಾಬಲ್ಯ, ಎಚ್‌ಸಿಎ ಜಯಭೇರಿ

ಕ್ರಿಕೆಟ್‌: ನೀನಾ ತಂಡಕ್ಕೆ ಭರ್ಜರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬೆಳಗಾವಿಯ ನೀನಾ ಸ್ಪೋರ್ಟ್ಸ್‌ ಕ್ಲಬ್‌ ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳವಾರ 338 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಬೆಳಗಾವಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನೀನಾ ತಂಡ 49.5 ಓವರ್‌ಗಳಲ್ಲಿ ಮಜೀದ್‌ ಮಕಂದಾರ (154) ಮತ್ತು ಸಂತೋಷ ಸುಲೇಗಪಾಟೀಲ (190) ಶತಕಗಳ ಬಲದಿಂದ 413 ರನ್ ಕಲೆಹಾಕಿತು. ಎದುರಾಳಿ ಬೆಳಗಾವಿಯ ಇಂಡಿಯನ್‌ ಬಾಯ್ಸ್‌ ತಂಡ 21.2 ಓವರ್‌ಗಳಲ್ಲಿ 75 ರನ್‌ ಗಳಿಸಿ ಆಲೌಟ್‌ ಆಯಿತು. ವಿನಾಯಕ ಕಾಂಬ್ಳೆ (11ಕ್ಕೆ4) ಚುರುಕಿನ ಬೌಲಿಂಗ್‌ನಿಂದ ಎದುರಾಳಿ ತಂಡ ಬೇಗನೆ ಆಲೌಟ್‌ ಆಯಿತು.

ಇಲ್ಲಿನ ರೈಲ್ವೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಳಗಾವಿಯ ಆನಂದ ಕ್ರಿಕೆಟ್‌ ಕೋಚಿಂಗ್‌ ಅಕಾಡೆಮಿ ಒಂಬತ್ತು ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಭಟ್ಕಳ ಸ್ಪೋರ್ಟ್ಸ್‌ ಕ್ಲಬ್‌ 34.3 ಓವರ್‌ಗಳಲ್ಲಿ 107 ರನ್‌ ಗಳಿಸಿತ್ತು. ಈ ಗುರಿಯನ್ನು ಎದುರಾಳಿ ತಂಡ 24.3 ಓವರ್‌ಗಳಲ್ಲಿ ಮುಟ್ಟಿತು.

ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ‘ಬಿ’ ತಂಡ 36 ರನ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಈ ತಂಡ ಪುನೀತ್‌ ಬಸವ (70), ಮಣಿಕಂಠ ಬುಕಿಟಗಾರ (71) ಅರ್ಧಶತಕಗಳ ಬಲದಿಂದ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 222 ರನ್‌ ಗಳಿಸಿತು. ಎದುರಾಳಿ ಧಾರವಾಡದ ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ ‘ಬಿ’ ತಂಡ 43.5 ಓವರ್‌ಗಳಲ್ಲಿ 186 ರನ್‌ ಕಲೆಹಾಕಿ ತನ್ನ ಹೋರಾಟ ಮುಗಿಸಿತು.

ಬಿಡಿಕೆಗೆ ಜಯ: ಸೋಮವಾರ ನಡೆದ ಪಂದ್ಯದಲ್ಲಿ ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ ಗುರಿ ಬೆನ್ನಟ್ಟಿ ಆರು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಮೊದಲು ಬ್ಯಾಟ್‌ ಮಾಡಿದ ಗದುಗಿನ ಜನೋಪಂಥರ್ ಕ್ರಿಕೆಟ್‌ ಅಕಾಡೆಮಿ 50 ಓವರ್‌ಗಳಲ್ಲಿ 310 ರನ್ ಗಳಿಸಿತು. ಸವಾಲಿನ ಗುರಿಯನ್ನು ಬಿಡಿಕೆ 46.5 ಓವರ್‌ಗಳಲ್ಲಿ ತಲುಪಿತು.

ಇನ್ನಷ್ಟು ಪಂದ್ಯಗಳಲ್ಲಿ ಹುಬ್ಬಳ್ಳಿಯ ಟ್ಯಾಲೆಂಟ್‌ ಸ್ಪೋರ್ಟ್ಸ್ ಕ್ಲಬ್‌ ವಿರುದ್ಧ ಗದುಗಿನ ಸ್ಪೋರ್ಟ್ಸ್ ಅಕಾಡೆಮಿ ತಂಡ 62 ರನ್‌ಗಳಿಂದ, ಹುಬ್ಬಳ್ಳಿಯ ಶ್ರೀಸಿದ್ಧಾರೂಢ ಸ್ವಾಮಿ ಸ್ಪೋರ್ಟ್ಸ್‌ ಕ್ಲಬ್‌ ಬೆಳಗಾವಿಯ ವಿಜಯ ಕ್ರಿಕೆಟ್‌ ಅಕಾಡೆಮಿ ಮೇಲೆ ಎರಡು ವಿಕೆಟ್‌ಗಳಿಂದ ಗೆಲುವು ಸಾಧಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು