ಶನಿವಾರ, ಅಕ್ಟೋಬರ್ 24, 2020
27 °C

ಅಫ್ಗಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್‌ ನಜೀಬ್‌ ತಾರಕೈ ರಸ್ತೆ ಅಪಘಾತದಲ್ಲಿ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಕಾಬೂಲ್‌: ಕಳೆದ ವಾರ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಫ್ಗಾನಿಸ್ತಾನ ಕ್ರಿಕೆಟ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ನಜೀಬ್ ತಾರಕೈ (29) ಮಂಗಳವಾರ ಮೃತಪಟ್ಟಿರುವುದಾಗಿ ಕ್ರಿಕೆಟ್ ಮಂಡಳಿ (ಎಸಿಬಿ) ಮಂಗಳವಾರ ತಿಳಿಸಿದೆ.

‘ಅಕ್ಟೋಬರ್ 2 ರಂದು ಕಾರು ಅಪಘಾತದಲ್ಲಿ ನಜೀಬ್‌ ತೀವ್ರವಾಗಿ ಗಾಯಗೊಂಡಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ,’ ಎಂದು ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ ಶನಿವಾರ ಟ್ವೀಟ್ ಮಾಡಿತ್ತು.

ಆರಂಭದಲ್ಲಿ ನಂಗರ್‌ಹಾರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಜೀಬ್‌ ಅವರನ್ನು ಚಿಕಿತ್ಸೆಗಾಗಿ ಶೀಘ್ರದಲ್ಲೇ ಕಾಬೂಲ್‌ ಅಥವಾ ವಿದೇಶಕ್ಕೆ ಸ್ಥಳಾಂತರಿಸಲು ಎಸಿಬಿ ಚಿಂತನೆ ನಡೆಸಿತ್ತು. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

‘ಕ್ರಿಕೆಟ್‌ ಅನ್ನು ಪ್ರೀತಿಸುವ ಅಫ್ಗಾನಿಸ್ತಾನ ಮತ್ತು ಎಸಿಬಿ ಆರಂಭಿಕ ಬ್ಯಾಟ್ಸ್‌ಮನ್‌ನ ಅಗಲಿಕೆಗೆ ಶೋಕಿಸುತ್ತಿದೆ. ನಜೀಬ್ ತಾರಕೈ ನಮ್ಮೆಲ್ಲರನ್ನು ದಿಗ್ಭ್ರಾಂತಿಗೆ ತಳ್ಳಿದ್ದಾರೆ’ ಎಂದು ಎಸಿಬಿ ಟ್ವೀಟ್ ಮಾಡಿದೆ.

ನಜೀಬ್‌ ತಾರಕೈ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12 ಟಿ20 ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ನಜೀಬ್‌ ಅವರು 2014 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟಿ 20 ವಿಶ್ವಕಪ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು.

ಮಾರ್ಚ್ 2017 ರಲ್ಲಿ ನಡೆದ ಟಿ 20 ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಸಿಡಿಸಿದ್ದ 90ರನ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಗರಿಷ್ಠ ಸ್ಕೋರ್‌ ಆಗಿತ್ತು. ಸೆಪ್ಟೆಂಬರ್‌ 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ್ದ ಏಕದಿನ ಪಂದ್ಯವೇ ಅವರ ಕೊನೇ ಪಂದ್ಯವೂ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು