ಕರಾಚಿ: ಪಾಕಿಸ್ತಾನದಲ್ಲಿ ಆಡಲು ತಂಡವನ್ನು ರವಾನಿಸದ ಹೊರತು ಭಾರತದಲ್ಲಿ ನಡೆಯಲಿರುವ ಐಸಿಸಿ ಸೇರಿದಂತೆ ಎಲ್ಲ ಟೂರ್ನಿಗಳನ್ನು ಬಹಿಷ್ಕರಿಸುವಂತೆ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ ಕರೆ ನೀಡಿದ್ದಾರೆ.

ಐಸಿಸಿ ಸಭೆಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಐ) ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಕರಾಚಿ ಆರ್ಟನ್ಸ್ ಕೌನ್ಸಿಲ್ನಲ್ಲಿ ನಡೆದ ಉರ್ದು ಸಮ್ಮೇಳನದಲ್ಲಿ ಮಾತನಾಡಿದ ಅಫ್ರಿದಿ, ಪಿಸಿಬಿ ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

'ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಐಸಿಸಿ ಟ್ರೋಫಿ ಆಯೋಜನೆಯಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಲು ಪಾಕಿಸ್ತಾನ ಸ್ವಾವಲಂಬಿಯಾಗಬೇಕು' ಎಂದು ಅವರು ಹೇಳಿದ್ದಾರೆ.

'ಭಾರತ ಪಾಕಿಸ್ತಾನಕ್ಕೆ ಬಂದು ಆಡದಿದ್ದರೆ ನಾವು ಅಲ್ಲಿಗೆ ಹೋಗಿ ಆಡುವ ಅಗತ್ಯವೇ ಇಲ್ಲ. ಭಾರತದಲ್ಲಿ ನಡೆಯುವ ಟೂರ್ನಿಗಳನ್ನು ಬರಿಷ್ಕರಿಸಬೇಕು' ಎಂದು ಅವರು ಹೇಳಿದರು.

ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಭಾರತ ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡಲಿವೆ. ಪಾಕಿಸ್ತಾನದ ಬೇಡಿಕೆಯಂತೆ 2027ರವರೆಗೆ ನಡೆಯುವ ಐಸಿಸಿ ಟೂರ್ನಿಗಳಲ್ಲಿ ಇಂಥದ್ದೇ ಏರ್ಪಾಡನ್ನು ಮುಂದುವರಿಸಲು ಐಸಿಸಿ ತಾತ್ವಿಕವಾಗಿ ಒಪ್ಪಿಗೆಯನ್ನು ನೀಡಿವೆ ಎಂದು ತಿಳಿದು ಬಂದಿದೆ.
.ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ: ಹೈಬ್ರಿಡ್ ಮಾದರಿ ಅಂತಿಮ.ಚಾಂಪಿಯನ್ಸ್ ಟ್ರೋಫಿ: ಹೈಬ್ರಿಡ್ ಮಾದರಿಗೆ ಸಿದ್ಧವಿಲ್ಲ; ಪಿಸಿಬಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.