ಮಂಗಳವಾರ, ಮಾರ್ಚ್ 21, 2023
23 °C

ಐಪಿಎಲ್‌ ಎರಡು ಭಾಗಗಳಲ್ಲಿ ನಡೆಯಲಿ: ನೆಸ್ ವಾಡಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಜ್‌ಕೋಟ್: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ಪ್ರತಿ ವರ್ಷ ಎರಡು ಪ್ರತ್ಯೇಕ ಭಾಗಗಳಲ್ಲಿ  ಆಯೋಜಿಸಬೇಕು ಎಂದು ಪಂಜಾಬ್ ಕಿಂಗ್ಸ್ ಫ್ರ್ಯಾಂಚೈಸಿಯ ಸಹಮಾಲೀಕ ನೆಸ್ ವಾಡಿಯಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. 

ಮುಂದಿನ ಐದು ವರ್ಷಗಳ ಐಪಿಎಲ್ ಪ್ರಸಾರ ಹಕ್ಕುಗಳು ಈಚೆಗೆ ದಾಖಲೆಯ ₹ 48,390 ಕೋಟಿಗೆ ಹರಾಜಾಗಿವೆ. ಹೋದ ಬಾರಿಯ ಹರಾಜಿಗಿಂತ ಸರಿಸುಮಾರು ಮೂರು ಪಟ್ಟು ಹೆಚ್ಚಿನ ಮೌಲ್ಯವು ಈ ಟೂರ್ನಿಗೆ ಲಭಿಸಿದೆ. 

ಮುಂಬರುವ ವರ್ಷಗಳಲ್ಲಿ ಪ್ರತಿ ಆವೃತ್ತಿಯಲ್ಲಿ ತಲಾ 94 ಪಂದ್ಯಗಳು ಆಯೋಜನೆಗೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಈ ಬಗ್ಗೆ ಮಾತನಾಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ವಾಡಿಯಾ, ‘ಅಭೂತಪೂರ್ವ ಹರಾಜು ಮೌಲ್ಯ ಲಭಿಸಲು ಶ್ರಮಿಸಿದ ಜಯ್ ಶಾ ಮತ್ತು ಬಳಗಕ್ಕೆ ಅಭಿನಂದನೆಗಳು. ಟೂರ್ನಿಯಲ್ಲಿ ತಂಡಗಳು  ತಮ್ಮ ತವರಿನಂಗಳದಲ್ಲಿ ಹೆಚ್ಚು ಪಂದ್ಯಗಳನ್ನು ಆಡುವಂತಾಗಬೇಕು. ಸದ್ಯ ಇರುವ ಪ್ರತಿ ತಾಣದಲ್ಲಿಯೂ ತಲಾ ಏಳು ಪಂದ್ಯಗಳನ್ನು ಕನಿಷ್ಠ 14ಕ್ಕಾದರೂ ಏರಿಸಬೇಕು’ ಎಂದಿದ್ದಾರೆ.

‘ಆವೃತ್ತಿಯೂ ದೀರ್ಘವಾಗಿ ನಡೆಯುವಂತಾಗಬೇಕು. ಆದರೆ, ನಾಲ್ಕು ತಿಂಗಳುಗಳ ಕಾಲ ನಡೆಸುವುದು ಕಷ್ಟವಾದರೆ ಎರಡು ಭಾಗಗಳಲ್ಲಿ ವಿಂಗಡಿಸಬೇಕು. ಒಂದು ಭಾಗವನ್ನು ಭಾರತದಲ್ಲಿ ಇನ್ನೊಂದನ್ನು ವಿದೇಶದಲ್ಲಿ ನಡೆಸಬೇಕು’ ಎಂದಿದ್ದಾರೆ.

ಈ ಮೊದಲು ಎಂಟು ತಂಡಗಳಿದ್ದಾಗ ಪ್ರತಿ ತಂಡವೂ 14 ಪಂದ್ಯಗಳನ್ನು ಆಡುತ್ತಿದ್ದವು. 15ನೇ ಆವೃತ್ತಿಯಲ್ಲಿ ಎರಡು ಹೊಸ ತಂಡಗಳು ಸೇರಿದವು. ಆದರೆ ಪ್ರತಿ ತಂಡಕ್ಕೂ ತಲಾ 14 ಪಂದ್ಯಗಳು ಸಿಗುವಂತೆ ವೇಳಾಪಟ್ಟಿಯನ್ನು ರಚಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು