ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ತೂಗುಯ್ಯಾಲೆಯಲ್ಲಿ ಕನ್ನಡಿಗ ಮನೀಶ್ ಪಾಂಡೆ ಐಪಿಎಲ್ ಭವಿಷ್ಯ?

Last Updated 6 ಅಕ್ಟೋಬರ್ 2021, 12:41 IST
ಅಕ್ಷರ ಗಾತ್ರ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶತಕ ಗಳಿಸಿದ ಮೊತ್ತ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಖ್ಯಾತಿಯ ಕನ್ನಡಿಗ ಮನೀಶ್ ಪಾಂಡೆ, ಐಪಿಎಲ್ ಭವಿಷ್ಯವೀಗ ತೂಗುಯ್ಯಾಲೆಯಲ್ಲಿದೆ.

ಪ್ರಸಕ್ತ ಸಾಗುತ್ತಿರುವ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಮನೀಶ್ ಪಾಂಡೆ, ಅವರಿಗೆ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ಸಾಧ್ಯವಾಗಲಿಲ್ಲ.

ಇದರಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಗಿದೆ. ಹಾಗಾಗಿ 2021ನೇ ಸಾಲಿನಲ್ಲಿ ಎಸ್‌ಆರ್‌ಎಚ್‌ಗೆ ಇನ್ನೆರಡು ಪಂದ್ಯಗಳು ಮಾತ್ರ ಬಾಕಿ ಉಳಿದಿರುವಂತೆಯೇ ಮಗದೊಮ್ಮೆ ಅವಕಾಶ ಸಿಗುವುದು ಅನುಮಾನವೆನಿಸಿದೆ.

ಪ್ರಸಕ್ತ ಸಾಲಿನಲ್ಲಿ ಏಳು ಪಂದ್ಯಗಳನ್ನು ಆಡಿರುವ ಪಾಂಡೆ 37.16ರ ಸರಾಸರಿಯಲ್ಲಿ ಒಟ್ಟು 223 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕವೂ (61*) ಸೇರಿವೆ.

ಆದರೆ 114.35ರ ಸ್ಟೈಕ್‌ರೇಟ್ ಮಾತ್ರ ಕಾಪಾಡಿಕೊಂಡಿರುವುದು ಟೀಕೆಗೆ ಕಾರಣವಾಗಿದೆ. ನಿಧಾನಗತಿಯ ಆಟ ಹಾಗೂ ನಿರ್ಣಾಯಕ ಹಂತಗಳಲ್ಲಿ ಎಡವಿರುವುದು ಮನೀಶ್‌ಗೆ ಮುಳುವಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ ಆಗಲೇ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಮನೀಶ್ ಪಾಂಡೆ ಅವರ ಐಪಿಎಲ್ ಭವಿಷ್ಯಕ್ಕೂ ಕಂಟಕ ಎದುರಾಗಿದೆ.

ಮನೀಶ್ ಪಾಂಡೆ ಐಪಿಎಲ್ ಅಂಕಿಅಂಶ ಇಂತಿದೆ:
ಪಂದ್ಯ: 153
ಅಜೇಯ: 26
ರನ್: 3491
ಗರಿಷ್ಠ: 114*
ಸರಾಸರಿ: 30.09
ಸ್ಟ್ರೈಕ್‌ರೇಟ್: 121.17
ಶತಕ: 1
ಅರ್ಧಶತಕ: 20
ಬೌಂಡರಿ: 302
ಸಿಕ್ಸರ್: 101
ಕ್ಯಾಚ್: 76

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT