ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್ನೊಂದು ರೆಡ್ ಬಾಲ್ ಬಾಕಿ, ಅದನ್ನು ಟಿಕ್ ಮಾಡಿ: ಕೊಹ್ಲಿಗೆ ರಾಹುಲ್ ಸಲಹೆ

Published 3 ಜುಲೈ 2024, 3:01 IST
Last Updated 3 ಜುಲೈ 2024, 3:01 IST
ಅಕ್ಷರ ಗಾತ್ರ

ಬ್ರಿಜ್‌ಟೌನ್: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ತಮ್ಮ ವೃತ್ತಿ ಜೀವನದಲ್ಲಿ ಬಹುತೇಕ ಎಲ್ಲ ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದಾರೆ. ಆದರೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಕೊರತೆ ಮಾತ್ರ ಕಾಡುತ್ತಿದೆ.

ಇದನ್ನೇ ಉಲ್ಲೇಖ ಮಾಡಿರುವ ಟೀಮ್ ಇಂಡಿಯಾದ ನಿರ್ಗಮಿತ ಮುಖ್ಯ ಕೋಚ್ ರಾಹುಲ್ ದ್ರಾವಿಡ್, 'ಎಲ್ಲ ಮೂರು ವೈಟ್ ಬಾಲ್ ಟಿಕ್ ಮಾಡಲಾಗಿದೆ. ಇನ್ನೊಂದು ರೆಡ್ ಬಾಲ್ ಬಾಕಿ ಉಳಿದಿದೆ. ಅದನ್ನು ಟಿಕ್ ಮಾಡಿ' ಎಂದು ಸಲಹೆ ನೀಡಿದ್ದಾರೆ.

ಟ್ವೆಂಟಿ-20 ವಿಶ್ವಕಪ್ ಗೆಲುವಿನ ಬಳಿಕ ಟೀಮ್ ಇಂಡಿಯಾ ವಿದಾಯದ ಭಾಷಣದ ವೇಳೆ ರಾಹುಲ್ ಈ ಕುರಿತು ಹೇಳಿದ್ದಾರೆ. ಈ ವೇಳೆ ರಾಹುಲ್ ಹಾಗೂ ಕೊಹ್ಲಿ ಪರಸ್ಪರ ನಗುಮುಖ ಬೀರಿದ್ದಾರೆ.

2008ರ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ವಿರಾಟ್, 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿದ್ದರು. 2024ರಲ್ಲಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಸಾಧನೆ ಮಾಡಿದ್ದಾರೆ. ಆ ಮೂಲಕ ಓರ್ವ ಆಟಗಾರನಾಗಿ ಐಸಿಸಿ ವೈಟ್ ಬಾಲ್ ಕ್ರಿಕೆಟ್‌ನ ಎಲ್ಲ ಮಹತ್ವದ ಟ್ರೋಫಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಆದರೆ ಎರಡು ಸಲ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ (2021, 2023) ತಲುಪಿದರೂ ವಿರಾಟ್ ಕೊಹ್ಲಿಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಈಗ ಈ ಕೊರತೆಯನ್ನು ನೀಗಿಸಲು ದ್ರಾವಿಡ್ ಸಲಹೆ ನೀಡಿದ್ದಾರೆ.

ಈ ಸಲ ವಿಶ್ವಕಪ್ ಗೆಲುವಿನ ಬಳಿಕ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT