ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಕಾಲಿಕ ಐಪಿಎಲ್‌ ತಂಡಕ್ಕೆ ಧೋನಿ ನಾಯಕ

Published 18 ಫೆಬ್ರುವರಿ 2024, 20:45 IST
Last Updated 18 ಫೆಬ್ರುವರಿ 2024, 20:45 IST
ಅಕ್ಷರ ಗಾತ್ರ

ನವದೆಹಲಿ: ದಿಗ್ಗಜ ಮಹೇಂದ್ರಸಿಂಗ್ ಧೋನಿ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಸಾರ್ವಕಾಲೀಕ ಶ್ರೇಷ್ಠ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಮಾಜಿ ಕ್ರಿಕೆಟಿಗರಾದ ವಾಸೀಂ ಅಕ್ರಂ, ಮ್ಯಾಥ್ಯೂ ಹೇಡನ್, ಟಾಮ್ ಮೂಡಿ ಮತ್ತು ಡೇಲ್ ಸ್ಟೇಯ್ನ್ ಅವರಿದ್ದ ಆಯ್ಕೆ ಸಮಿತಿಯು ಈ ತಂಡವನ್ನು ಆಯ್ಕೆ ಮಾಡಿದೆ. ಸಮಿತಿಯಲ್ಲಿ 70ಕ್ಕೂ ಹೆಚ್ಚು ಪತ್ರಕರ್ತರೂ ಇದ್ದರು.

ಭಾರತದ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್‌ ಅವರನ್ನು ಈ ತಂಡದ ಆರಂಭಿಕ ಬ್ಯಾಟರ್‌ಗಳಾಗಿದ್ದಾರೆ. ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಮೂರನೇ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ.

‘ವಿಶ್ವಕಪ್, ಐಪಿಎಲ್, ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ಜಯಸಿರುವ ಧೋನಿಯವರೇ ಈ ತಂಡದ ನಾಯಕತ್ವಕ್ಕೆ ಅತ್ಯಂತ ಸೂಕ್ತ ವ್ಯಕ್ತಿ’ ಎಂದು ಸ್ಟಾರ್ ಸ್ಪೋರ್ಟ್ಸ್‌ ಇನ್‌ಕ್ರೆಡಿಬಲ್ 16 ಆಫ್‌ ಐಪಿಎಲ್‌ ಶೋನಲ್ಲಿ ಡೇಲ್ ಸ್ಟೇಯ್ನ್ ಹೇಳಿದರು.

ತಂಡ: ಮಹೇಂದ್ರಸಿಂಗ್ ಧೋನಿ (ನಾಯಕ), ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಡೇವಿಡ್ ವಾರ್ನರ್, ಸುರೇಶ್ ರೈನಾ, ಎಬಿ ಡಿವಿಲಿಯರ್ಸ್, ಸೂರ್ಯಕುಮಾರ್ ಯಾದವ್‌, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಕೀರನ್ ಪೊಲಾರ್ಡ್, ರಶೀದ್ ಖಾನ್, ಸುನಿಲ್ ನಾರಾಯಣ, ಯಜುವೇಂದ್ರ ಚಾಹಲ್, ಲಸಿತ ಮಾಲಿಂಗ, ಜಸ್‌ಪ್ರೀತ್ ಬೂಮ್ರಾ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT