ಬುಧವಾರ, ಅಕ್ಟೋಬರ್ 28, 2020
17 °C
ಮಾರ್ಷ್‌ ಸ್ಥಾನಕ್ಕೆ ಹೋಲ್ಡರ್‌

ಹಿಮ್ಮಡಿ ಗಾಯ: ಐಪಿಎಲ್‌ ಟೂರ್ನಿಯಿಂದ ಆಸ್ಟ್ರೇಲಿಯಾ ಆಟಗಾರ ಹೊರಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಹಿಮ್ಮಡಿ ಗಾಯದಿಂದ ಬಳಲುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಅವರು ಐಪಿಎಲ್‌ ಕ್ರಿಕೆಟ್‌ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ವೆಸ್ಟ್‌ ಇಂಡೀಸ್‌ನ ಜೇಸನ್‌ ಹೋಲ್ಡರ್‌ ಹೈದರಾಬಾದ್‌ ತಂಡ ಸೇರಿಕೊಳ್ಳಲಿದ್ದಾರೆ.

ಹೈದರಾಬಾದ್‌ ತಂಡವು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಎದುರು ಆಡಿದ ಪಂದ್ಯದಲ್ಲಿ ಮಾರ್ಷ್‌ ಗಾಯಗೊಂಡಿದ್ದರು. ಅವರ ಬದಲಿಗೆ ಜೇಸನ್‌ ಹೋಲ್ಡರ್‌  ಯುಎಇಯಲ್ಲಿರುವ ತಂಡವನ್ನು ಶೀಘ್ರವೇ ಸೇರಿಕೊಳ್ಳಲಿದ್ದಾರೆ.

‘ಮಿಚೆಲ್‌ ಮಾರ್ಷ್‌ ಗಾಯದ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಆಡುತ್ತಿಲ್ಲ. ಅವರು ಬೇಗ ಗುಣಮುಖರಾಗಲಿ. ಅವರ ಸ್ಥಾನವನ್ನು ಹೋಲ್ಡರ್ ತುಂಬಲಿದ್ದಾರೆ’ ಎಂದು ಸನ್‌ರೈಸರ್ಸ್‌ ಹೈದರಾಬಾದ್‌ ಟ್ವೀಟ್‌ ಮಾಡಿದೆ.

ಆಸ್ಟ್ರೇಲಿಯಾದ ಮಿಚೆಲ್‌ ಮಾರ್ಷ್‌ ಅವರು ಐಪಿಎಲ್‌ ಟೂರ್ನಿಯಿಂದ ಹೊರಗುಳಿಯುತ್ತಿರುವುದು ಇದು ಎರಡನೇ ಬಾರಿ. 2017ರ ಟೂರ್ನಿಯಲ್ಲಿ ಅವರು ಭುಜದ ನೋವಿನ ಕಾರಣ ನಿರ್ಗಮಿಸಿದ್ದರು.

ವೆಸ್ಟ್‌ ಇಂಡೀಸ್‌ ತಂಡದ ನಾಯಕ‌ ಹೋಲ್ಡರ್ ಅವರು 2014–15ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಮೊದಲ ಬಾರಿ ಕಣಕ್ಕಿಳಿದಿದ್ದರು. 2016ರಲ್ಲಿ ಕೊನೆಯ ಬಾರಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲಿ ಆಡಿದ್ದರು. ಇತ್ತೀಚೆಗೆ ಕೊನೆಗೊಂಡ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲೂ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು