ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಸ್‌ಕೆ ಹೈಪರ್ಫಾಮೆನ್ಸ್‌ ಕೇಂದ್ರಕ್ಕೆ ಅಶ್ವಿನ್

Published 5 ಜೂನ್ 2024, 12:56 IST
Last Updated 5 ಜೂನ್ 2024, 12:56 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅಗ್ರಮಾನ್ಯ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರ್ಯಾಂಚೈಸಿಯ ಉನ್ನತ ಕಾರ್ಯಕ್ಷಮತಾ ಕೇಂದ್ರದ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇದರೊಂದಿಗೆ ಅವರು ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರಳುವ ಹಾದಿ ಸುಲಭವಾಗಲಿದೆ. 

‘ಅಶ್ವಿನ್ ಅವರು ಭಾರತ ಮತ್ತು ತಮಿಳುನಾಡು ತಂಡಗಳ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರು ನಮ್ಮ ಬಳಗಕ್ಕೆ ಬರುತ್ತಿರುವುದರಿಂದ ಬಲ ಹೆಚ್ಚಲಿದೆ. ನಮ್ಮ ಹೈ ಪರ್ಫಾಮೆನ್ಸ್ ಸೆಂಟರ್ ಹಾಗೂ ಅಕಾಡೆಮಿಗಳ ಉಸ್ತುವಾರಿಯನ್ನು ಅವರು ನೋಡಿಕೊಳ್ಳುವರು’ ಎಂದು ಫ್ರ್ಯಾಂಚೈಸಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಾಶಿ ವಿಶ್ವನಾಥ್ ತಿಳಿಸಿದ್ದಾರೆ.

ಚೆನ್ನೈನ ಹೊರವಲಯದಲ್ಲಿ ಸೂಪರ್ ಕಿಂಗ್ಸ್ ತಂಡದ ಹೈ ಪರ್ಫಾರ್ಮೆನ್ಸ್ ಕೇಂದ್ರವಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಗಳಿಸಿದ ಭಾರತದ ಎರಡನೇ ಬೌಲರ್ ಆಗಿದ್ದಾರೆ. ಅನಿಲ್ ಕುಂಬ್ಳೆ ಅವರ ನಂತರ ನಂತರದ ಸ್ಥಾನದಲ್ಲಿ ಅಶ್ವಿನ್ ಇದ್ದಾರೆ. 

2008 ರಿಂದ 2015ರವರೆಗೆ ಅಶ್ವಿನ್ ಅವರು ಚೆನ್ನೈತಂಡದಲ್ಲಿಯೇ ಆಡಿದ್ದರು. ಕಳೆದ ಆವೃತ್ತಿಯಲ್ಲಿ ಅವರು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡಿದ್ದರು. 

ಇದೇ ವರ್ಷ ಮೇಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರಲ್ಲಿ ಅಶ್ವಿನ್ ಅವರು ಬಿಡ್‌ಗೆ ಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.

‘ಹರಾಜು ಪ್ರಕ್ರಿಯೆಯಲ್ಲಿ  ಎಲ್ಲವೂ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಕಾದು ನೋಡುತ್ತೇವೆ’ಎಂದೂ ಕಾಶಿ ಹೇಳೀದರು. 

ಅಶ್ವಿನ್ ಅವರು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ಮೊದಲ ಡಿವಿಷನ್ ಲೀಗ್‌ನಲ್ಲಿಯೂ ಆಡಲು ಅರ್ಹರಾಗಿದ್ದಾರೆ. 

ಚೆನ್ನೈ ತಂಡದ ವಿಕೆಟ್‌ಕೀಪರ್–ಬ್ಯಾಟರ್ 42 ವರ್ಷದ ಮಹೇಂದ್ರಸಿಂಗ್ ಧೋನಿ ಅವರು ಈಚೆಗೆ ನಡೆದ ಐಪಿಎಲ್‌ನಲ್ಲಿ ನಾಯಕತ್ವವನ್ನು ಋತುರಾಜ್ ಗಾಯಕವಾಡ್ ಅವರಿಗೆ ಹಸ್ತಾಂತರಿಸಿದ್ದರು. ಧೋನಿ ಅವರು ಮುಂದಿನ ವರ್ಷ ಕಣಕ್ಕಿಳಿಯುವ ಕುರಿತು ಯಾವುಧೇ ಖಚಿತ ಮಾಹಿತಿ ಇಲ್ಲ. ಆದ್ದರಿಂದ ಅನುಭವಿ ಆಲ್‌ರೌಂಡರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಯೋಜನೆ ತಂಡದ್ದಾಗಿದೆ ಎಂದು ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT