ಕುಲದೀಪ್ (4–0–30–4) ಅವರ ಎಸೆತಗಳ ತಿರುವು, ಚಲನೆಗಳನ್ನು ಅಂದಾಜಿಸುವಲ್ಲಿ ಎಡವಿದ ಪಾಕ್ ತಂಡವು ಸಾಧಾರಣ ಮೊತ್ತ ಗಳಿಸಿತು. ಕುಲದೀಪ್ ಅವರಿಗೆ ವರುಣ್ ಚಕ್ರವರ್ತಿ (30ಕ್ಕೆ2), ಅಕ್ಷರ್ ಪಟೇಲ್ (26ಕ್ಕೆ2) ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ (25ಕ್ಕೆ2) ಅವರೂ ಸಾಥ್ ನೀಡಿದರು.
ಆಟದ ಮೈದಾನದಲ್ಲಿಯೂ ‘ಆಪರೇಷನ್ ಸಿಂಧೂರ’...ಫಲಿತಾಂಶ ಒಂದೇ– ಭಾರತದ ವಿಜಯ. ನಮ್ಮ ಕ್ರಿಕೆಟ್ ಆಟಗಾರರಿಗೆ ಅಭಿನಂದನೆಗಳು
ಏಷ್ಯಾಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಅಜೇಯರಾಗುಳಿದು, ಮತ್ತೊಮ್ಮೆ ಪಾಕಿಸ್ತಾನವನ್ನು ಬಗ್ಗುಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡ ನಮ್ಮವರ ಆಟ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು.
ಒತ್ತಡದ ಸಮಯದಲ್ಲಿ ಸಂಯಮದ ಆಟ ಆಡಿದ ತಿಲಕ್ ವರ್ಮಾ, ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಕಡಿಮೆ ಮೊತ್ತಕ್ಕೆ… pic.twitter.com/lRMIZceNRX