ದುಬೈ: ಅಪಾರ ಒತ್ತಡದ ಪರಿಸ್ಥಿತಿಯಲ್ಲಿ ತಿಲಕ್ ವರ್ಮಾ ತಮ್ಮ ಜೀವನದ ಸ್ಮರಣೀಯ ಇನಿಂಗ್ಸ್ ಆಡಿದರು. ಅವರ ದಿಟ್ಟ ಆಟದ ಫಲವಾಗಿ ಭಾರತ ತಂಡವು ಏಷ್ಯಾ ಕಪ್ ಗೆದ್ದು ಸಂಭ್ರಮಿಸಿತು.

ಭಾನುವಾರ ರಾತ್ರಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ 147 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡವು ಆರಂಭದಲ್ಲಿಯೇ ಎಡವಿತ್ತು. 4 ಓವರ್ಗಳಲ್ಲಿ 20 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಅದರಲ್ಲಿ ಸಿಡಿಲಮರಿ ಅಭಿಷೇಕ್ ಶರ್ಮಾ, ನಾಯಕ ಸೂರ್ಯಕುಮಾರ್ ಮತ್ತು ಶುಭಮನ್ ಗಿಲ್ ಅವರು ಡಗ್ಔಟ್ ಸೇರಿದರು. ಸ್ಪಿನ್ನರ್ ಕುಲದೀಪ್ ಯಾದವ್ (30ಕ್ಕೆ4) ಅವರ ಶ್ರಮವು ವ್ಯರ್ಥವಾಗುವ ಆತಂಕ ಎದುರಾಗಿತ್ತು. ಏಕೆಂದರೆ ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಪಾಕ್ ತಂಡದ ಆರಂಭಿಕ ಜೋಡಿಯು ಅಮೋಘ ಆಟವಾಡಿದ್ದರು. ಆದರೂ ಪಾಕ್ ತಂಡವನ್ನು 146 ರನ್ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಕುಲದೀಪ್ ಪ್ರಮುಖ ಪಾತ್ರ ವಹಿಸಿದ್ದರು.

ಆದರೆ ಕುಲದೀಪ್ ಶ್ರಮ ವ್ಯರ್ಥವಾಗದಂತೆ ತಿಲಕ್ (ಔಟಾಗದೇ 69; 53ಎಸೆತ, 4X3, 6X4) ನೋಡಿಕೊಂಡರು. ಭಾರತ ತಂಡವು 5 ವಿಕೆಟ್ಗಳಿಂದ ಜಯಿಸಿತು. ಭಾರತವು 9ನೇ ಬಾರಿ ಏಷ್ಯಾ ಕಪ್ ಮುಡಿಗೇರಿಸಿಕೊಂಡಿತು. ಪ್ರಸಕ್ತ ಟೂರ್ನಿಯಲ್ಲಿ ಭಾರತ ತಂಡವು ಪಾಕ್ ತಂಡವನ್ನು ಮೂರು ಪಂದ್ಯಗಳಲ್ಲಿ ಮಣಿಸಿತು. ಏಷ್ಯಾ ಕಪ್ ಇತಿಹಾಸದಲ್ಲಿ ಉಭಯ ತಂಡಗಳು ಇದೇ ಮೊದಲ ಸಲ ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು.

ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಸಂಜು ಸ್ಯಾಮ್ಸನ್ (24; 21ಎ) ಅವರೊಂದಿಗೆ 57 ರನ್ ಸೇರಿಸಿದರು. ಆದರೆ ಸಂಜು ಪ್ರಯೋಗಿಸಿದ ಒಂದು ತಪ್ಪು ಹೊಡೆತದಿಂದ ಜೊತೆಯಾಟ ಮುರಿಯಿತು. ಅಬ್ರಾರ್ ಅಹಮದ್ ಅವರು ಸಂಜು ವಿಕೆಟ್ ಗಳಿಸಿ ಸಂಭ್ರಮಿಸಿದರು.

ಆದರೆ ತಿಲಕ್ ಮಾತ್ರ ಎದೆಗುಂದಲಿಲ್ಲ. ಅವರಿಗೆ ಅದೃಷ್ಟವೂ ಜೊತೆಗೂಡಿತು. ತಿಲಕ್ ಅವರನ್ನು ಒಂದು ಹಂತದಲ್ಲಿ ಸುಲಭವಾಗಿ ರನ್ಔಟ್ ಮಾಡುವ ಅವಕಾಶವನ್ನು ವಿಕೆಟ್ಕೀಪರ್ ಕೈತಪ್ಪಿಸಿಕೊಂಡರು. ಅದು ದುಬಾರಿಯಾಯಿತು. ತಿಲಕ್ ಜೊತೆಗೂಡಿದ ಶಿವಂ ದುಬೆ (33; 22ಎ, 4X2, 6X2) ತಂಡವನ್ನು ಗೆಲುವಿನ ಸನಿಹ ತಂದು ನಿಲ್ಲಿಸಿದರು.

ಪಾಕ್ ತಂಡದ ಅನುಭವಿ ಬೌಲರ್ ಹ್ಯಾರಿಸ್ ರವೂಫ್ ಅವರ ಓವರ್ಗಳಲ್ಲಿಯೇ ತಿಲಕ್ ಮತ್ತು ದುಬೆ ಹೆಚ್ಚು ರನ್ಗಳನ್ನು ಸೂರೆ ಮಾಡಿದರು. ಅದರಲ್ಲೂ 15ನೇ ಓವರ್ನಲ್ಲಿ 17 ರನ್ ಮತ್ತು 18ನೇ ಓವರ್ನಲ್ಲಿ 13 ರನ್ ಹೊಡೆದ ಭಾರತದ ಜೋಡಿಯು ಮಿಂಚಿತು.

ಕುಲದೀಪ್ ಮೋಡಿ

ಕುಲದೀಪ್ (4–0–30–4) ಅವರ ಎಸೆತಗಳ ತಿರುವು, ಚಲನೆಗಳನ್ನು ಅಂದಾಜಿಸುವಲ್ಲಿ ಎಡವಿದ ಪಾಕ್ ತಂಡವು ಸಾಧಾರಣ ಮೊತ್ತ ಗಳಿಸಿತು. ಕುಲದೀಪ್ ಅವರಿಗೆ ವರುಣ್ ಚಕ್ರವರ್ತಿ (30ಕ್ಕೆ2), ಅಕ್ಷರ್ ಪಟೇಲ್ (26ಕ್ಕೆ2) ಮತ್ತು ವೇಗಿ ಜಸ್ಪ್ರೀತ್ ಬೂಮ್ರಾ (25ಕ್ಕೆ2) ಅವರೂ ಉತ್ತಮ ಜೊತೆ ನೀಡಿದರು. ಅದರಿಂದಾಗಿ ಇನಿಂಗ್ಸ್ನಲ್ಲಿ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಪಾಕ್ ತಂಡದ ಎಲ್ಲ ಬ್ಯಾಟರ್ಗಳೂ ಗೂಡಿಗೆ ಮರಳಿದರು.

ಪಾಕ್ ಆರಂಭಿಕ ಜೋಡಿ ಸಾಹೀಬ್ಝಾದಾ ಫರ್ಹಾನ್ (57; 38ಎಸೆತ) ಮತ್ತು ಅನುಭವಿ ಫಕರ್ ಜಮಾನ್ (46; 35ಎ) ಅವರು ಪ್ರಯತ್ನಿಸಿದರು. ಗಾಯಗೊಂಡಿರುವ ಹಾರ್ದಿಕ್ ಪಾಂಡ್ಯ ಅವರಿಲ್ಲದೇ ಕಣಕ್ಕಿಳಿದ ಭಾರತ ತಂಡಕ್ಕೆ ಶಿವಂ ದುಬೆ ಬೌಲಿಂಗ್ ಆರಂಭಿಸಿದರು. ಮೊದಲ ಓವರ್ ಚೆನ್ನಾಗಿಯೇ ಮಾಡಿದರು.

ಆದರೆ ನಂತರ ಪಾಕ್ ಜೋಡಿಯು ಬೀಸಾಟ ಆರಂಭಿಸಿತು. ಇದರಿಂದಾಗಿ ಹತ್ತು ಓವರ್ ದಾಟುವ ಮುನ್ನವೇ ಪಾಕ್ ತಂಡದ ಸ್ಕೋರ್ಬೋರ್ಡ್ನಲ್ಲಿ 84 ರನ್ಗಳಾಗಿದ್ದವು. ಒಂದೂ ವಿಕೆಟ್ ಪತನವಾಗಿರಲಿಲ್ಲ. ಅಷ್ಟರಲ್ಲಿ ಫರ್ಹಾನ್ ಕೂಡ ತಮ್ಮ ಅರ್ಧಶತಕ ಗಳಿಸಿದ್ದರು.

ಆದರೆ ಹತ್ತನೇ ಓವರ್ ಬೌಲಿಂಗ್ ಮಾಡಿದ ವರುಣ್ ಅವರ ಎಸೆತವನ್ನು ಸಿಕ್ಸರ್ಗೆತ್ತುವ ಭರದಲ್ಲಿ ತಿಲಕ್ ವರ್ಮಾಗೆ ಸುಲಭ ಕ್ಯಾಚ್ ಕೊಟ್ಟ ಫರ್ಹಾನ್ ಆಟಕ್ಕೆ ತೆರೆಬಿತ್ತು. ಇದರ ನಂತರದ 62 ರನ್ಗಳು ಪಾಕ್ ಖಾತೆ ಸೇರುವಷ್ಟರಲ್ಲಿ ಎಲ್ಲ ಬ್ಯಾಟರ್ಗಳು ಪೆವಿಲಿಯನ್ ಮರಳಿದರು.

ಆಟದ ಮೈದಾನದಲ್ಲಿಯೂ ‘ಆಪರೇಷನ್ ಸಿಂಧೂರ’...ಫಲಿತಾಂಶ ಒಂದೇ– ಭಾರತದ ವಿಜಯ. ನಮ್ಮ ಕ್ರಿಕೆಟ್ ಆಟಗಾರರಿಗೆ ಅಭಿನಂದನೆಗಳು..!
ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.