ಭಾನುವಾರ, ಮಾರ್ಚ್ 26, 2023
24 °C
ನಮೀಬಿಯಾದ ಡೇವಿಡ್ ವೀಸ್‌, ಬಾಂಗ್ಲಾದೇಶದ ಶಕೀಬ್ ಅಲ್‌ ಹಸನ್‌ಗೂ ಸ್ಥಾನ

ಪಾಕಿಸ್ತಾನದ ಆಸಿಫ್ ಅಲಿ ಐಸಿಸಿ ತಿಂಗಳ ಆಟಗಾರ

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಭರ್ಜರಿ ಹೊಡೆತಗಳ ಮೂಲಕ ರಂಜಿಸುವ ಪಾಕಿಸ್ತಾನದ ಬ್ಯಾಟರ್ ಆಸಿಫ್ ಅಲಿ ಅವರನ್ನು ಐಸಿಸಿ ಅಕ್ಟೋಬರ್ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮತ್ತು ನಮೀಬಿಯಾದ ಡೇವಿಡ್ ವೀಸ್ ಅವರಿಗೂ ಗೌರವ ಸಂದಿದೆ.

ಮಹಿಳೆಯರ ವಿಭಾಗದಲ್ಲಿ ಐರ್ಲೆಂಡ್‌ನ ಆಲ್‌ರೌಂಡರ್‌ ಲಾರಾ ಡೆಲಾನಿ, ಬ್ಯಾಟರ್ ಗ್ಯಾಬಿ ಲ್ಯೂಯಿಸ್ ಮತ್ತು ಜಿಂಬಾಬ್ವೆಯ ನಾಯಕಿ, ಆಲ್‌ರೌಂಡರ್ ಮೇರಿ ಆ್ಯನ್ ಮುಸೊಂಡ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಟ್ವೆಂಟಿ–20 ವಿಶ್ವಕಪ್ ಟುರ್ನಿಯಲ್ಲಿ ನ್ಯೂಜಿಲೆಂಡ್ ಮತ್ತು ಅಫ್ಗಾನಿಸ್ತಾನ ಎದುರು ಪಾಕಿಸ್ತಾನ ಜಯ ಗಳಿಸುವಲ್ಲಿ ಆಸಿಫ್ ಅಲಿ ಪ್ರಮುಖ ಪಾತ್ರ ವಹಿಸಿದ್ದರು. ನ್ಯೂಜಿಲೆಂಡ್ ಎದುರು 12 ಎಸೆತಗಳಲ್ಲಿ 27 ರನ್ ಗಳಿಸಿದ್ದ ಅವರು ಅಫ್ಗಾನಿಸ್ತಾನ ಎದುರಿನ ಪಂದ್ಯದ 19ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿ ಗೆಲುವಿಗೆ ಕಾರಣರಾಗಿದ್ದರು.

ಕಳೆದ ತಿಂಗಳಲ್ಲಿ ಒಟ್ಟು ಆರು ಟ್ವೆಂಟಿ–20 ಪಂದ್ಯಗಳನ್ನು ಆಡಿರುವ ಶಕೀಬ್ ಅಲ್ ಹಸನ್ ಗಾಯದ ಕಾರಣದಿಂದ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳ ನಂತರ ವಾಪಸ್ ತೆರಳಿದ್ದಾರೆ. ಆರು ಪಂದ್ಯಗಳಲ್ಲಿ 109.16ರ ಸ್ಟ್ರೈಕ್‌ರೇಟ್‌ನಲ್ಲಿ 131 ರನ್ ಗಳಿಸಿದ್ದ ಅವರು 11 ವಿಕೆಟ್ ಕೂಡ ಉರುಳಿಸಿದ್ದಾರೆ.

ವೀಸ್ ಅವರು ವಿಶ್ವಕಪ್‌ನಲ್ಲಿ ಅಮೋಘ ಆಟವಾಡುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಎಂಟು ಪಂದ್ಯ ಆಡಿರುವ ಅವರು 162 ರನ್ ಕಲೆ ಹಾಕಿದ್ದಾರೆ. ಏಳು ವಿಕೆಟ್‌ಗಳನ್ನೂ ಗಳಿಸಿದ್ದಾರೆ. ಅವರಿಂದಾಗಿ ತಂಡ ಸೂಪರ್ 12ರ ಹಂತ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಗುಂಪು ಹಂತದ ಮಹತ್ವದ ಪಂದ್ಯದಲ್ಲಿ 28 ಎಸೆತದಲ್ಲಿ 66 ರನ್ ಗಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು