ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AUS vs PAK | ಆಸ್ಟ್ರೇಲಿಯಾದಲ್ಲಿ ಸತತ 14ನೇ ಟೆಸ್ಟ್‌ ಸೋಲು ಕಂಡ ಪಾಕಿಸ್ತಾನ

Last Updated 2 ಡಿಸೆಂಬರ್ 2019, 13:15 IST
ಅಕ್ಷರ ಗಾತ್ರ

ಅಡಿಲೇಡ್: ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಕ್ಲೀನ್‌ ಸ್ವೀಪ್‌ ಮಾಡಿತು. ಇದರೊಂದಿಗೆ ಪಾಕಿಸ್ತಾನ ತಂಡ 1999ರಿಂದ ಈಚೆಗೆ ಆಸ್ಟ್ರೇಲಿಯಾದಲ್ಲಿ ಆಡಿದ 14 ಪಂದ್ಯಗಳಲ್ಲಿಯೂ ಸೋಲು ಕಂಡಿತು.

ಇಲ್ಲಿನ ಓವಲ್‌ ಮೈದಾನದಲ್ಲಿ ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಆತಿಥೇಯ ಆಸಿಸ್‌,ಮೊದಲ ಇನಿಂಗ್ಸ್‌ನಲ್ಲಿ ಕೇವಲ 3 ವಿಕೆಟ್‌ಗೆ 589 ರನ್‌ ಪೇರಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು.ಆರಂಭಿಕ ಡೇವಿಡ್‌ ವಾರ್ನರ್‌ (335) ಹಾಗೂ ಮಾರ್ನಸ್‌ ಲಾಬುಚಾನ್‌ (162) ಭರ್ಜರಿ ಬ್ಯಾಟಿಂಗ್‌ ಮಾಡಿದ್ದರು.

ಬಳಿಕ ಇನಿಂಗ್ಸ್‌ ಆರಂಭಿಸಿದ್ದ ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 302ರನ್‌ ಗಳಿಗೆ ಆಲೌಟ್‌ ಆಗಿತ್ತು. ಹೀಗಾಗಿ ಆಸ್ಟ್ರೇಲಿಯಾ ಫಾಲೋಆನ್‌ ಹೇರಿತ್ತು. ಎರಡನೇ ಇನಿಂಗ್ಸ್‌ನಲ್ಲಿಯೂ ಪರಾಕ್ರಮ ತೋರಿದ ಆಸಿಸ್‌ ಬೌಲರ್‌ಗಳು ಪಾಕ್‌ ಬ್ಯಾಟ್ಸ್‌ಮನ್‌ಗಳನ್ನು ಕೇವಲ 239 ರನ್‌ ಗಳಿಗೆ ನಿಯಂತ್ರಿಸಿದರು.

ಹೀಗಾಗಿ ಪ್ರವಾಸಿ ಪಡೆ ಇನಿಂಗ್ಸ್‌ ಹಾಗೂ 48 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತು.ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ಇನಿಂಗ್ಸ್‌ ಹಾಗೂ 5 ರನ್‌ಗಳ ಗೆಲುವು ಸಾಧಿಸಿತ್ತು.ಈ ಹಿಂದೆ ಭಾರತ (1948–77) ಹಾಗೂ ವೆಸ್ಟ್‌ ಇಂಡೀಸ್‌ (2000–2009) ತಂಡಗಳು ಆಸ್ಟ್ರೇಲಿಯಾದಲ್ಲಿ ತಲಾ 9 ಸತತ ಸೋಲುಗಳನ್ನು ಕಂಡಿದ್ದವು.

ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ತ್ರಿಶತಕ ಹಾಗೂಸರಣಿಯ ಎರಡು ಇನಿಂಗ್ಸ್‌ಗಳಿಂದ 489ರನ್‌ ಸಿಡಿಸಿದ್ದ ಡೇವಿಡ್‌ ವಾರ್ನರ್‌ ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌:127 ಓವರ್‌ಗಳಲ್ಲಿ3 ವಿಕೆಟ್‌ಗೆ 589
ಡೇವಿಡ್‌ ವಾರ್ನರ್‌ 335ಅಜೇಯ
ಮಾರ್ನಸ್‌ ಲಾಬುಚಾನ್‌ 162
ಶಾಹೀನ್‌ ಅಫ್ರಿದಿ 88ಕ್ಕೆ 3

ಪಾಕಿಸ್ತಾನ ಮೊದಲ ಇನಿಂಗ್ಸ್‌:94.4 ಓವರ್‌ಗಳಲ್ಲಿ 302ಕ್ಕೆ ಆಲೌಟ್‌
ಯಾಸಿರ್‌ ಶಾ 113
ಬಾಬರ್‌ ಅಜಂ 97
ಮಿಚೇಲ್‌ ಸ್ಟಾರ್ಕ್‌ 66ಕ್ಕೆ 6
ಪ್ಯಾಟ್‌ ಕಮಿನ್ಸ್‌ 83ಕ್ಕೆ 3

ಪಾಕಿಸ್ತಾನ ಎರಡನೇ ಇನಿಂಗ್ಸ್‌: 82 ಓವರ್‌ಗಳಲ್ಲಿ 239ಕ್ಕೆ ಆಲೌಟ್‌
ಶಾನ್‌ ಮಸೂದ್‌ 68
ಅಸಾದ್‌ ಶಫಿಕ್‌ 57
ನಾಥನ್‌ ಲಿಯಾನ್ 69ಕ್ಕೆ 5
ಜೋಶ್‌ ಹ್ಯಾಷಲ್‌ವುಡ್‌ 63ಕ್ಕೆ 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT