ಬ್ರಿಸ್ಬೇನ್: ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ನಿಖರ ದಾಳಿ ಸಂಘಟಿಸಿರುವ ಭಾರತ ತಂಡದ ಬೌಲರ್ಗಳು ದ್ವಿತೀಯ ಇನ್ನಿಂಗ್ಸ್ನಲ್ಲೂ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು 294 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ಇದರೊಂದಿಗೆ ಮಗದೊಂದು ಐತಿಹಾಸಿಕ ಸರಣಿ ಗೆಲುವಿಗಾಗಿ ಭಾರತ 328 ರನ್ ಗಳಿಸಬೇಕಾದ ಅಗತ್ಯವಿದೆ. ಮೊದಲ ಇನ್ನಿಂಗ್ಸ್ನಲ್ಲಿ ಆಸೀಸ್ 33 ರನ್ಗಳ ಮಹತ್ವದ ಮುನ್ನಡೆ ದಾಖಲಿಸಿತ್ತು.

ಬಳಿಕ ಉತ್ತರ ನೀಡಲಾರಂಭಿಸಿದ ಟೀಮ್ ಇಂಡಿಯಾ, ಮಳೆಯಿಂದಾಗಿ ದಿನದಾಟ ಮುಕ್ತಾಯಗೊಳಿಸಿದಾಗ ವಿಕೆಟ್ ನಷ್ಟವಿಲ್ಲದೆ ನಾಲ್ಕು ರನ್ ಗಳಿಸಿದೆ.

ನಾಲ್ಕನೇ ದಿನದಾಟದಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ ಮೊಹಮ್ಮದ್ ಸಿರಾಜ್ (73ಕ್ಕೆ 5 ವಿಕೆಟ್) ಹಾಗೂ ಶಾರ್ದೂಲ್ ಠಾಕೂರ್ (61ಕ್ಕೆ 4 ವಿಕೆಟ್) ದಾಳಿಗೆ ಕುಸಿದ ಆಸೀಸ್ ದ್ವಿತೀಯ ಇನ್ನಿಂಗ್ಸ್ನಲ್ಲಿ75.5 ಓವರ್ಗಳಲ್ಲಿ 294 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.

ಇದನ್ನೂ ಓದಿ:ಫೀಲ್ಡಿಂಗ್ ಮಧ್ಯೆ ಕ್ರೀಸಿಗಿಳಿದು ಸ್ಟೀವನ್ ಸ್ಮಿತ್ ಅನುಕರಿಸಿದ ರೋಹಿತ್ ಶರ್ಮಾ

ಪ್ರಸ್ತುತ ಪಂದ್ಯ ರೋಚಕ ಹಂತವನ್ನು ತಲುಪಿದೆ. ಇನ್ನೊಂದು ದಿನ ಬಾಕಿ ಉಳಿದಿರುವಂತೆಯೇ ಪಂದ್ಯಕ್ಕೆ ಮಳೆಯ ಅಡಚಣೆಯ ಭೀತಿ ಕೂಡಾ ಕಾಡುತ್ತಿದೆ. ಈ ಪಂದ್ಯವನ್ನು ಡ್ರಾಗೊಳಿಸಿದರೂ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತ ತನ್ನ ಬಳಿಯೇ ಉಳಿಸಿಕೊಳ್ಳಲಿದೆ. ಕಳೆದ ಬಾರಿ ಆಸೀಸ್ ಪ್ರವಾಸದಲ್ಲಿ ಭಾರತ ಐತಿಹಾಸಿಕ ಹಾಗೂ ಚೊಚ್ಚಲ ಟೆಸ್ಟ್ ಸರಣಿ ಗೆಲುವನ್ನು ದಾಖಲಿಸಿತ್ತು.

ವಿಕೆಟ್ ನಷ್ಟವಿಲ್ಲದೆ 21 ರನ್ ಎಂಬ ಮೊತ್ತದಿಂದ ಬ್ಯಾಟಿಂಗ್ ಮುಂದುವರಿಸಿದ ಆಸೀಸ್ಗೆ ಮಾರ್ನಸ್ ಹ್ಯಾರಿಸ್ ಹಾಗೂ ಡೇವಿಡ್ ವಾರ್ನರ್ ಆಕ್ರಮಣಕಾರಿ ಆರಂಭವೊದಗಿಸಿದರು. ಬೃಹತ್ ಮೊತ್ತ ಕಲೆ ಹಾಕಿ ಆದಷ್ಟು ಬೇಗ ಡಿಕ್ಲೇರ್ ಮಾಡುವುದು ಆಸೀಸ್ ಇರಾದೆಯಾಗಿತ್ತು.

ಇವರಿಬ್ಬರು ಮೊದಲ ವಿಕೆಟ್ಗೆ 89 ರನ್ಗಳ ಜೊತೆಯಾಟ ನೀಡಿದರು. ಇದರೊಂದಿಗೆ ಸರಣಿಯಲ್ಲಿ ಮೊದಲ ಬಾರಿಗೆ ಆಸೀಸ್ ಆರಂಭಿಕರು ಉತ್ತಮ ಜೊತೆಯಾಟದಲ್ಲಿ ಭಾಗಿಯಾದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮಾರ್ನಸ್ ಹ್ಯಾರಿಸ್ (38) ಹೊರದಬ್ಬಿದ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲೂ ಮಿಂಚಿದರು.

ಇದಾದ ಬೆನ್ನಲ್ಲೇ ಅಪಾಯಕಾರಿ ಡೇವಿಡ್ ವಾರ್ನರ್ (48) ಎಲ್ಬಿಡಬ್ಲ್ಯು ಬಲೆಗೆ ಸಿಲುಕಿಸಿದ ವಾಷಿಂಗ್ಟನ್ ಸುಂದರ್ ಮಗದೊಂದು ಆಘಾತ ನೀಡಿದರು.

ಬಳಿಕ ಒಂದೇ ಓವರ್ನಲ್ಲಿ ಮೊದಲ ಇನ್ನಿಂಗ್ಸ್ನ ಶತಕವೀರ ಮಾರ್ನಸ್ ಲಾಬುಷೇನ್ (25) ಹಾಗೂ ಮ್ಯಾಥ್ಯೂ ವೇಡ್ (0) ಹೊರದಬ್ಬಿದ ಮೊಹಮ್ಮದ್ ಸಿರಾಜ್ ಡಬಲ್ ಆಘಾತ ನೀಡಿದರು. ಇದರಿಂದ 123 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್ ರನ್ ರೇಟ್ ಕುಂಠಿತವಾಯಿತು.

ಊಟದ ವಿರಾಮದ ಹೊತ್ತಿಗೆ ಆಸೀಸ್ ನಾಲ್ಕು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ಮಗದೊಂದು ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಸ್ಟೀವನ್ ಸ್ಮಿತ್ ಅರ್ಧಸತಕ ಸಾಧನೆ ಮಾಡಿದರು. ಇವರಿಗೆ ಕ್ಯಾಮರಾನ್ ಗ್ರೀನ್ (4*) ಸಾಥ್ ನೀಡಿದರು.

ಈ ಮಧ್ಯೆ ಸ್ಮಿತ್ ವಿಕೆಟ್ ಪಡೆಯುವಲ್ಲಿ ಸಿರಾಜ್ ಯಶಸ್ವಿಯಾದರು. ಇದರೊಂದಿಗೆ 196 ರನ್ನಿಗೆ ಆಸೀಸ್ ಐದನೇ ವಿಕೆಟ್ ಪತನಗೊಂಡಿತು.

ಕ್ಯಾಮರಾನ್ ಗ್ರೀನ್ (37) ಹಾಗೂ ನಾಯಕ ಟಿಮ್ ಪೇನ್ (27) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರೂ ಇವರಿಬ್ಬರನ್ನು ಶಾರ್ದೂಲ್ ಠಾಕೂರ್ ಹೊರದಬ್ಬಿದರು. ಇದರೊಂದಿಗೆ 242 ರನ್ನಿಗೆ ಏಳನೇ ವಿಕೆಟ್ ಕಳೆದುಕೊಂಡಿತು.

ಇದನ್ನೂ ಓದಿ:ಜೊಚ್ಚಲ ಅರ್ಧಶತಕ ಬಾರಿಸಿದ ಸುಂದರ್-ಶಾರ್ದೂಲ್ ಸ್ಮರಣೀಯ ದಾಖಲೆ

ಟೀ ವಿರಾಮದ ಹೊತ್ತಿನಲ್ಲಿ ಮಳೆ ಸುರಿದ ಪರಿಣಾಮ ಅಲ್ಪ ಹೊತ್ತು ಪಂದ್ಯ ಸ್ಥಗಿತಗೊಂಡಿತ್ತು. ಬಳಿಕ ಪಂದ್ಯ ಮುಂದುವರಿದಾಗ ಆಸೀಸ್ ತಂಡವನ್ನು 294 ರನ್ಗಳಿಗೆ ಆಲೌಟ್ ಮಾಡುವಲ್ಲಿ ಭಾರತ ಯಶಸ್ವಿಯಾಯಿತು.

ಇನ್ನುಳಿದಂತೆ ಪ್ಯಾಟ್ ಕಮಿನ್ಸ್ (28), ಮಿಚೆಲ್ ಸ್ಟಾರ್ಕ್ (1), ನಥನ್ ಲಿಯನ್ (13) ಹಾಗೂ ಜೋಶ್ ಹ್ಯಾಜಲ್ವುಡ್ (9) ರನ್ ಗಳಿಸಿದರು.

ಭಾರತದ ಪರ ಮೊಹಮ್ಮದ್ ಸಿರಾಜ್ 73 ರನ್ ತೆತ್ತು 5 ವಿಕೆಟ್ ಕಬಳಿಸಿದರು. ಇದೇ ಆಸೀಸ್ ಸರಣಿಯಲ್ಲಿ ಪದಾರ್ಪಣೆ ಮಾಡಿರುವ ಸಿರಾಜ್ ಟೆಸ್ಟ್ ಕ್ರಿಕೆಟ್ನಲ್ಲಿ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದರು.

ಇವರಿಗೆ ತಕ್ಕ ಸಾಥ್ ನೀಡಿದ ಶಾರ್ದೂಲ್ ಠಾಕೂರ್ 61 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಇನ್ನೊಂದು ವಿಕೆಟ್ ವಾಷಿಂಗ್ಟನ್ ಸುಂದರ್ ಪಾಲಾಯಿತು. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನವದೀಪ್ ಸೈನಿ ಎರಡನೇ ಇನ್ನಿಂಗ್ಸ್ನಲ್ಲಿ ಐದು ಓವರ್ ಮಾತ್ರ ಎಸೆದರು. ಅಲ್ಲದೆ ಪರಿಣಾಮಕಾರಿ ಎನಿಸಿಕೊಳ್ಳಲಿಲ್ಲ.

ಈ ಮೊದಲು ಆಸೀಸ್ನ 369 ರನ್ಗಳಿಗೆ ಉತ್ತರವಾಗಿ ದಿಟ್ಟ ಹೋರಾಟ ತೋರಿದ ವಾಷಿಂಗ್ಟನ್ ಸುಂದರ್ (62) ಹಾಗೂ ಶಾರ್ದೂಲ್ ಠಾಕೂರ್ (67) ಚೊಚ್ಚಲ ಅರ್ಧಶತಕದ ನೆರವಿನಿಂದ ಭಾರತ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 336 ರನ್ ಪೇರಿಸಿತ್ತು. ಆಸೀಸ್ ಪರ ಜೋಶ್ ಹ್ಯಾಜಲ್ವುಡ್ ಐದು ವಿಕೆಟ್ ಕಬಳಿಸಿದ್ದರು.

ಮಾರ್ನಸ್ ಲಾಬುಷೇನ್ ಶತಕ(108) ಹಾಗೂ ನಾಯಕ ಟಿಮ್ ಪೇನ್ ಅರ್ಧಶತಕದ (50) ಬೆಂಬಲದೊಂದಿಗೆ ಆಸೀಸ್ ಮೊದಲ ಇನ್ನಿಂಗ್ಸ್ನಲ್ಲಿ 369 ರನ್ಗಳ ಸ್ಫರ್ಧಾತ್ಮಕ ಮೊತ್ತ ಪೇರಿಸಿತ್ತು. ಪದಾರ್ಪಣಾ ಆಟಗಾರ ವಾಷಿಂಗ್ಟನ್ ಸುಂದರ್, ತಂಗರಸು ನಟರಾಜನ್ ಮತ್ತು ಶಾರ್ದೂಲ್ ಠಾಕೂರ್ ತಲಾ ಮೂರು ವಿಕೆಟ್ಗಳನ್ನು ಕಬಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.