ಮೆಲ್ಬರ್ನ: ಆಟದಂಗಳದಲ್ಲಿ ಎದುರಾಳಿ ಆಟಗಾರರನ್ನು ತೆಗಳುವುದರಲ್ಲಿ ಆಸ್ಟ್ರೇಲಿಯಾ ಆಟಗಾರರನ್ನು ಯಾರೂ ಮೀರಿಸಲು ಸಾಧ್ಯವಿಲ್ಲ ಅಲ್ಲವೇ? ಆದರೆ ಅವರು ಭಾರತದ ವಿರಾಟ್ ಕೊಹ್ಲಿ ಎದುರು ಇಂತಹ ದುಸ್ಸಾಹಸಕ್ಕೆ ಕೈಹಾಕುವುದಿಲ್ಲವಂತೆ. ಯಾಕೆ ಗೊತ್ತಾ?

ಆಸ್ಟ್ರೇಲಿಯಾ ಕ್ರಿಕೆಟಿಗ ಮೈಕೆಲ್ ಕ್ಲಾರ್ಕ್ ಅವರು ಈ ಗುಟ್ಟನ್ನು ಮಂಗಳವಾರ ಬಹಿರಂಗ ಮಾಡಿದ್ದಾರೆ.

‘ದೊಡ್ಡ ಮೊತ್ತದ ಆದಾಯ ತರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಆಸ್ಟ್ರೇಲಿಯನ್ನರು ಈ ರೀತಿ ಮಾಡುತ್ತಿದ್ದಾರೆ. ಒಂದೊಮ್ಮೆ ವಿರಾಟ್ ಕೊಹ್ಲಿಯನ್ನು ಎದುರು ಹಾಕಿಕೊಂಡರೆ ಐಪಿಎಲ್ ಅವಕಾಶ ತಪ್ಪಿಹೊಗುವ ಭಯ ಅವರಿಗೆ ಇದೆ’ ಎಂದು ಕ್ಲಾರ್ಕ್ ಹೇಳಿದ್ದಾರೆ.

‘ಕ್ರಿಕೆಟ್ ಕ್ಷೇತ್ರದಲ್ಲಿ ಭಾರತವು ಇವತ್ತು ಆರ್ಥಿಕವಾಗಿ ಎಷ್ಟು ಪ್ರಬಲವಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆ ದೇಶದಲ್ಲಿ ಐಪಿಎಲ್ನಿಂದಾಗಿ ಅಂತರರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್ ಟೂರ್ನಿಗಳು ಕೂಡ ಶ್ರೀಮಂತವಾಗಿವೆ’ ಎಂದು ಕ್ಲಾರ್ಕ್ ಬಿಗ್ ಸ್ಪೋರ್ಟ್ಸ್ ಬ್ರೇಕ್ಫಾಸ್ಟ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

‘ಆಸ್ಟ್ರೇಲಿಯಾ ಕ್ರಿಕೆಟ್ ತಂಡವಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಬೇರೆ ಎಲ್ಲ ತಂಡಗಳೂ ಕೊಹ್ಲಿ ಎದುರು ಇದೇ ರೀತಿ ಆಗಬಹುದೆಂದು ನನ್ನ ಭಾವನೆ. ಕೊಹ್ಲಿ ಅಥವಾ ಭಾರತದ ಇನ್ನುಳಿದ ಆಟಗಾರರನ್ನು ನಿಂದಿಸಲು ಹೆದರುತ್ತಾರೆ. ಏಕೆಂದರೆ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಅವರೊಂದಿಗೆ ಆಡಬೇಕೆಂಬ ಯೋಚನೆಯ ಅವರಿಗೆ ಇರುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಖಡಕ್ ಬಿರುನುಡಿಗಳಿಗೆ ಹೆಸರಾಗಿದ್ದ ಆಸ್ಟ್ರೇಲಿಯಾ ಆಟಗಾರರು ಈಗ ಮೃದುವಾಗಿದ್ದಾರೆ. ಐಪಿಎಲ್ ತಂಡಕ್ಕೆ ಆಯ್ಕೆಯಾದರೆ ಆರು ವಾರಗಳ ಆಟಕ್ಕೆ ಲಕ್ಷಾಂತರ ರೂಪಾಯಿ ಹಣ ಸಿಗುತ್ತದೆಯೆಂಬ ಮುಂದಾಲೋಚನೆ ಆಸ್ಟ್ರೇಲಿಯಾ ಆಟಗಾರರದ್ದಾಗಿದೆ’ ಎಂದರು.

ಭಾರತ ತಂಡವು ಈ ಹಿಂದೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋದಾಗ ನಿಂದನೆಯ ವಿವಾದಗಳು ತಾರಕಕ್ಕೇರಿದ್ದವು. 2008ರಲ್ಲಿ ಮಂಕಿ ಗೇಟ್ ಪ್ರಕರಣವು ಅದರಲ್ಲಿ ಪ್ರಮುಖವಾದದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.