ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಎಂಜಲು, ಬೆವರು ಬಳಕೆಗೆ ಆಸ್ಟ್ರೇಲಿಯಾ ತಡೆ

ಮಾರ್ಗದರ್ಶಿ ಸೂತ್ರಗಳನ್ನು ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾ
Last Updated 1 ಮೇ 2020, 20:15 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟ್‌ನಲ್ಲಿ ಚೆಂಡಿನ ಹೊಳಪು ಉಳಿಸಲು ಎಂಜಲು ಮತ್ತು ಬೆವರು ಬಳಸುವುದನ್ನು ತಡೆಯಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ.

ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಯಲು ಕೆಲವು ಮಾರ್ಗ ದರ್ಶಿ ಸೂತ್ರಗಳನ್ನು ರೂಪಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿಯು, ಲಾಕ್‌ಡೌನ್ ನಂತರದಲ್ಲಿ ತರಬೇತಿ ಶಿಬಿರಗಳು ಆರಂಭವಾದರೆ ಎಂಜಲು ಮತ್ತು ಬೆವರು ಬಳಸುವಂತಿಲ್ಲ ಎಂದಿದೆ.

‘ತರಬೇತಿ ತಾಣಗಳಲ್ಲಿ ಪರಸ್ಪರರಲ್ಲಿ ಅನಗತ್ಯ ಸಂಪರ್ಕಗಳನ್ನು ನಿರ್ಬಂಧಿಸಬೇಕು. ಡ್ರೆಸ್ಸಿಂಗ್ ಕೋಣೆ, ಶೌಚಾಲಯ ಮತ್ತು ಸಮುದಾಯ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕ್ರೀಡಾ ಕೇಂದ್ರಗಳು, ಕ್ಲಬ್‌ಗಳು ಚಟುವಟಿಕೆ ಆರಂಭಿಸುವ ಮುನ್ನ ಆಟಗಾರರ, ಸಿಬ್ಬಂದಿಯ ಆರೋಗ್ಯ ಸ್ಥಿತಿಯನ್ನು ದಾಖಲಿಸಿಕೊಳ್ಳಬೇಕು. ಆಟಕ್ಕೆ ಬರುವ ಮುಂಚಿನ 14 ದಿನಗಳಲ್ಲಿ ಅನಾರೋಗ್ಯಕ್ಕೊಳಗಾದವರು, ಕೊರೊನಾ ಸೋಂಕಿಗೊಳಗಾದವರು ಮತ್ತು ಅವರ ಸಂಪರ್ಕದಲ್ಲಿರುವವರನ್ನು ನಿರ್ಬಂಧಿಸಬೇಕು’ ಎಂದು ಸೂಚಿಸಿದೆ.

‘ ಆಟಗಾರರು ಮತ್ತು ಸಿಬ್ಬಂದಿಯು ತಮ್ಮಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಕಂಡುಬಂದರೂ ಸ್ವಯಂ ನಿರ್ಬಂಧ ಮತ್ತು ಗೃಹಬಂಧನ ಮಾಡಿಕೊಳ್ಳಬೇಕು. ವೈದ್ಯರ ಸಲಹೆ ಪಡೆದು ಚಿಕಿತ್ಸೆಗೆ ಒಳಗಾಗಬೇಕು. ಇದರಿಂದ ಅವರೂ ಸುರಕ್ಷಿತರಾಗಿರುತ್ತಾರೆ. ಬೆರೆಯವರಿಗೂ ತೊಂದರೆಯಾಗುವುದಿಲ್ಲ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT