ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್: ಮಾರ್ಷ್, ಟಿಮ್ ಆಟಕ್ಕೆ ಒಲಿದ ಜಯ

Published 22 ಫೆಬ್ರುವರಿ 2024, 0:30 IST
Last Updated 22 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್, ನ್ಯೂಜಿಲೆಂಡ್: ಪಂದ್ಯದ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಟಿಮ್ ಡೇವಿಡ್ ಅವರ ಆಟದ ಬಲದಿಂದ ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು.

ಆರು ವಿಕೆಟ್‌ಗಳಿಂದ ಗೆದ್ದ ಆಸ್ಟ್ರೇಲಿಯಾ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 215 ರನ್ ಗಳಿಸಿತು. ಡೆವೊನ್ ಕಾನ್ವೆ (63; 46ಎ, 4X5, 6X2) ಹಾಗೂ ರಚಿನ್ ರವೀಂದ್ರ (68; 35ಎ, 4X2, 6X6) ಅರ್ಧಶತಕ ಗಳಿಸಿದರು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು ಮಿಚೆಲ್ ಮಾರ್ಷ್ (ಔಟಾಗದೆ 72; 44ಎ, 4X2, 6X7) ಅಮೋಘ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 216 ರನ್ ಗಳಿಸಿ ಜಯಿಸಿತು. ಆತಿಥೇಯ ತಂಡದ ಬೌಲರ್‌ಗಳ ಬಿಗಿ ದಾಳಿಯಿಂದಾಗಿ ಆಸ್ಟ್ರೇಲಿಯಾ ತಂಡವು ಸರಾಗವಾಗಿ ರನ್ ಗಳಿಸಲು ಆಗಲಿಲ್ಲ. ಅದರಿಂದಾಗಿ ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯಾ ಜಯಕ್ಕೆ 4 ರನ್‌ಗಳ ಅಗತ್ಯವಿತ್ತು.

ಅನುಭವಿ ಬೌಲರ್ ಟಿಮ್ ಸೌಥಿ ಎಸೆತವನ್ನು ಬೌಂಡರಿಗೆರೆ ದಾಟಿಸಿದ ಟಿಮ್ ಡೇವಿಡ್ ಜಯದ ಸಂಭ್ರಮ ಆಚರಿಸಿದರು.

ಸಂಕ್ಷಿಪ್ತ ಸ್ಕೋರು

ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 215 (ಫಿನ್ ಅಲೆನ್ 32, ಡೆವೊನ್ ಕಾನ್ವೆ 63, ರಚಿನ್ ರವೀಂದ್ರ 68, ಮಿಚೆಲ್ ಸ್ಟಾರ್ಕ್ 39ಕ್ಕೆ1, ಪ್ಯಾಟ್ ಕಮಿನ್ಸ್ 43ಕ್ಕೆ1, ಮಿಚೆಲ್ ಮಾರ್ಷ್ 21ಕ್ಕೆ1)

ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 216 (ಟ್ರಾವಿಸ್ ಹೆಡ್ 24, ಡೇವಿಡ್ ವಾರ್ನರ್ 32, ಮಿಚೆಲ್ ಮಾರ್ಷ್ ಔಟಾಗದೆ 72, ಗ್ಲೆನ್ ಮ್ಯಾಕ್ಸ್‌ವೆಲ್ 25, ಜೋಷ್ ಇಂಗ್ಲಿಸ್ 20, ಟಿಮ್ ಡೇವಿಡ್ ಔಟಾಗದೆ 31, ಮಿಚೆಲ್ ಸ್ಯಾಂಟನರ್ 42ಕ್ಕೆ2)

ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್‌ಗಳ ಜಯ ಹಾಗೂ ಸರಣಿಯಲ್ಲಿ 1–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT