ಸೋಮವಾರ, ಜೂನ್ 21, 2021
30 °C

ಕ್ರಿಕೆಟ್‌: ಅಫ್ಗಾನಿಸ್ತಾನ ಎದುರು ಮೊದಲ ಬಾರಿ ಟೆಸ್ಟ್ ಆಡಲಿರುವ ಆಸ್ಟ್ರೇಲಿಯಾ ತಂಡ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟಿಗರು ಮೊದಲ ಬಾರಿ ಅಫ್ಗಾನಿಸ್ತಾನ ತಂಡವನ್ನು ಟೆಸ್ಟ್ ಪಂದ್ಯದಲ್ಲಿ ಎದುರಿಸಲಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಅಫ್ಗಾನಿಸ್ತಾನ ತಂಡದ ವಿರುದ್ಧದ ಟೆಸ್ಟ್‌ಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ. ಹೋಬರ್ಟ್‌ನಲ್ಲಿ ಈ ಪಂದ್ಯ ನಡೆಯಲಿದೆ ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಅಫ್ಗಾನಿಸ್ತಾನ ಎದುರು ಮೊದಲ ಬಾರಿ ನಡೆಯಲಿರುವ ಐತಿಹಾಸಿಕ ಟೆಸ್ಟ್‌ಗೆ ಆ ತಂಡವನ್ನು ಆಹ್ವಾನಿಸಲು ಉತ್ಸುಕರಾಗಿದ್ದೇವೆ‘ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಹಂಗಾಮಿ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲಿ ಹೇಳಿದ್ದಾರೆ.

ಅಫ್ಗಾನಿಸ್ತಾನ ವಿರುದ್ಧದ ಐದು ದಿನಗಳ ಪಂದ್ಯವು ನವೆಂಬರ್ 27ರಿಂದ ಹೋಬರ್ಟ್‌ನ ಬ್ಲಂಡ್‌ಸ್ಟೋನ್ ಅರೆನಾದಲ್ಲಿ ನಿಗದಿಯಾಗಿದೆ. ಆ ಬಳಿಕ ಆತಿಥೇಯ ತಂಡವು ಡಿಸೆಂಬರ್ 8ರಿಂದ ಆ್ಯಷಸ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ಅನ್ನು ಎದುರಿಸಲಿದೆ. ಬ್ರಿಸ್ಬೇನ್‌ನ ಗಾಬಾದಲ್ಲಿ ಈ ಹಣಾಹಣಿ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು