ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಕ್ರಿಕೆಟ್‌: ಸಹಸ್ರ ರನ್‌ ಪೂರೈಸಿದ ಗೇಲ್‌; ವಿಂಡೀಸ್‌ ತಾಳ್ಮೆಯ ಆಟ

ಗೆಲುವು@289
Last Updated 6 ಜೂನ್ 2019, 16:24 IST
ಅಕ್ಷರ ಗಾತ್ರ

ನಾಟಿಂಗಂ(ಇಂಗ್ಲೆಂಡ್‌): ಆಸ್ಟ್ರೇಲಿಯಾದ 289 ರನ್‌ ಗೆಲುವಿನ ಗುರಿ ಬೆನ್ನೇರಿ, ಆರಂಭದಲ್ಲಿ ಬಿರುಸಿನ ಆಟಕ್ಕೆ ಮುಂದಾದ ಕ್ರಿಸ್‌ ಗೇಲ್‌ ಹೆಚ್ಚುಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ, ವಿಶ್ವಕಪ್‌ ಕ್ರಿಕೆಟ್‌ನಲ್ಲಿ 1000 ರನ್‌ ಪೂರೈಸಿದ ಹೆಗ್ಗಳಿಕೆಗೆಅವರು ಪಾತ್ರರಾದರು.

ಇದೀಗ ವೆಸ್ಟ್‌ ಇಂಡೀಸ್ ಬ್ಯಾಟ್ಸ್‌ಮನ್‌ಗಳು ತಾಳ್ಮೆಯುತ ಆಟದ ಮೊರೆ ಹೋಗಿದ್ದು, ವಿಕೆಟ್‌ ಉಳಿಸಿಕೊಂಡು ನಿಧಾನಗತಿಯಲ್ಲಿ ರನ್‌ ಗಳಿಸುವ ಪ್ರಯತ್ನ ನಡೆಸಿದೆ. ಆರಂಭಿಕರಾಗಿ ಕಣಕ್ಕಿಳಿದ ಗೇಲ್‌ 17 ಎಸೆತಗಳಲ್ಲಿ ನಾಲ್ಕು ಬೌಂಡರಿ ಸಹಿತ 21 ರನ್‌ ಗಳಿಸಿದರು. ಅದಾಗಲೇ ಸಹಸ್ರ ರನ್‌ ಹೊಸ್ತಿಲಲ್ಲಿದ್ದ ಅವರು, ಇಂದು 1000ರನ್‌ ಪೂರೈಸಿದರು.

ಸ್ಕೋರ್‌ ವಿವರ:https://bit.ly/2wEHX9y

ಎಡಗೈ ಬ್ಯಾಟ್ಸ್‌ಮನ್‌ ಗೇಲ್‌ ಈ ಸಾಧನೆ ಮಾಡಿದ ವಿಶ್ವದ 18ನೇ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಈ ದಾಖಲೆ ಬರೆದ ವೆಸ್ಟ್‌ ಇಂಡೀಸ್‌ನ ಮೂರನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಬ್ರಯಾನ್‌ ಲಾರಾ (1,225) ಮತ್ತು ವಿವಿಯನ್‌ ರಿಚರ್ಡ್ಸ್‌ (1,003) ಈಗಾಗಲೇ ಈ ಸಾಧನೆ ಮಾಡಿದ್ದಾರೆ.

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರಪಟ್ಟಿಯಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಮೊದಲಿಗರಾಗಿದ್ದಾರೆ. 45 ಪಂದ್ಯಲ್ಲಿ 2,560 ರನ್‌ ಗಳಿಸಿದ್ದು, 241 ಬೌಂಡರಿ ಹಾಗೂ 27 ಸಿಕ್ಸರ್‌ಗಳನ್ನು ಒಳಗೊಂಡಿದೆ. ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಅವರ ಗರಿಷ್ಠ ಮೊತ್ತ 152 ರನ್‌ಗಳು. ಆರು ಶತಕ ಮತ್ತು 15 ಅರ್ಧ ಶತಕದ ದಾಖಲೆ ಹೊಂದಿದ್ದಾರೆ.

ಈಗಲೇ ವಿಶ್ವಕಪ್‌ನಲ್ಲಿ 40 ಸಿಕ್ಸರ್‌ಗಳನ್ನು ಸಿಡಿಸಿ 'ಸಿಕ್ಸರ್‌ ಸರದಾರ’ನಾಗಿ ಹೊರಹೊಮ್ಮಿದ್ದಾರೆ.

ನಾಲ್ಕು ವಿಕೆಟ್‌ ಕಳೆದು ಕೊಂಡಿರುವ ಕೆರೀಬಿಯನ್ಸ್‌:29 ಓವರ್‌ಗಳಲ್ಲಿ 160 ರನ್‌

ಪ್ರಾರಂಭದಲ್ಲಿಯೇಎವಿನ್‌ ಲೂಯಿಸ್‌(1) ನಿರ್ಗಮಿಸಿದರು. ಉತ್ತಮ ಪ್ರದರ್ಶನ ತೋರುತ್ತಿದ್ದ ಕ್ರಿಸ್‌ ಗೇಲ್‌(21) ಎಲ್‌ಬಿಡಬ್ಲ್ಯು ಇಂದ ಹೊರ ನಡೆದರು. ಈ ಸಂದರ್ಭದಲ್ಲಿ ಜೊತೆಯಾದನಿಕೋಲಸ್‌ ಪೂರನ್‌ (40) ಮತ್ತುಶಾಯ್‌ ಹೋಪ್‌ ತಾಳ್ಮೆಯುತ ಆಟವಾಡಿ ತಂಡಕ್ಕೆ ಆಸರೆಯಾದವರು.ಆ್ಯಂಡಂ ಜಂಪಾ ಎಸೆತದಲ್ಲಿ ಪೂರನ್‌ ವಿಕೆಟ್‌ ಒಪ್ಪಿಸಿದರು.

ದಿಟ್ಟತನ ತೋರಿರುವ ಶಾಯ್‌ ಹೋಪ್‌ ಅರ್ಧ ಶತಕ ಗಳಿಸಿ ಆಟ ಮುಂದುವರಿಸಿದ್ದಾರೆ.ಶಿಮ್ರಾನ್‌ ಹೆಟ್ಮೆಯರ್‌(21) ನಂತರ ಕಣಕ್ಕಿಳಿದಿರುವ ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ಬಿರುಸಿನ ಆಟಕ್ಕೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT