ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20: ಪಾಕಿಸ್ತಾನಕ್ಕೆ ಭರ್ಜರಿ ಜಯ

Last Updated 8 ನವೆಂಬರ್ 2020, 3:48 IST
ಅಕ್ಷರ ಗಾತ್ರ

ರಾವಲ್ಪಿಂಡಿ (ಎಎಫ್‌ಪಿ): ನಾಯಕ ಬಾಬರ್ ಆಜಂ (82; 55 ಎಸೆತ, 9 ಬೌಂಡರಿ, 1 ಸಿಕ್ಸರ್) ಅವರ ಭರ್ಜರಿ ಆಟದ ನೆರವಿನಿಂದ ಪಾಕಿಸ್ತಾನ ತಂಡ ಜಿಂಬಾಬ್ವೆ ಎದುರಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಆರು ವಿಕೆಟ್‌ಗಳ ಜಯ ಸಾಧಿಸಿತು. ಶನಿವಾರ ನಡೆದ ಪಂದ್ಯದಲ್ಲಿ 157 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ 18.5 ಓವರ್‌ಗಳಲ್ಲಿ ದಡ ಸೇರಿತು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಜಿಂಬಾಬ್ವೆ ವಿರುದ್ಧದ ಸತತ 12ನೇ ಜಯ ದಾಖಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆಗೆ ಐದು ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಬ್ರೆಂಡನ್ ಟೇಲರ್ ಮತ್ತು ಚಾಮು ಚಿಬಾಬ 29 ರನ್‌ಗಳ ಜೊತೆಯಾಟವಾಡಿದರು. ಮಧ್ಯಮ ಕ್ರಮಾಂಕದ ವೆಸ್ಲಿ ಮೆಧೆವೆರೆ (70; 48ಎ, 9 ಬೌಂ, 1 ಸಿ) ಅವರ ಚೊಚ್ಚಲ ಅರ್ಧಶತಕದ ನೆರವಿನಿಂದ ತಂಡ ಸವಾಲಿನ ಮೊತ್ತ ಕಲೆ ಹಾಕಿತು.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: 20 ಓವರ್‌ಗಳಲ್ಲಿ 6ಕ್ಕೆ 156 (ಬ್ರೆಂಡನ್ ಟೇಲರ್ 20, ಸೀನ್ ವಿಲಿಯಮ್ಸ್‌ 25, ವೆಸ್ಲಿ ಮಧವೆರೆ 70, ಎಲ್ಟನ್ ಚಿಗುಂಬುರ 21; ಮೊಹಮ್ಮದ್ ಹಸ್ನೈನ್ 25ಕ್ಕೆ1, ಹ್ಯಾರಿಸ್ ರವೂಫ್ 25ಕ್ಕೆ2, ವಹಾಬ್ ರಿಯಾಜ್ 37ಕ್ಕೆ2, ಉಸ್ಮಾನ್ ಖಾದಿರ್ 24ಕ್ಕೆ1); ಪಾಕಿಸ್ತಾನ: 18.5 ಓವರ್‌ಗಳಲ್ಲಿ 4ಕ್ಕೆ 157 (ಫಕ್ರ್ ಜಮಾನ್ 19, ಬಾಬರ್ ಆಜಂ 82, ಮೊಹಮ್ಮದ್ ಹಫೀಜ್ 36; ಬ್ಲೆಸಿಂಗ್ ಮುಜರಬಾನಿ 26ಕ್ಕೆ2, ತೆಂಡೈ ಚಟಾರ 25ಕ್ಕೆ1, ರಿಚರ್ಡ್ ಗರಾವ 37ಕ್ಕೆ1). ಪಾಕಿಸ್ತಾನಕ್ಕೆ 6 ವಿಕೆಟ್‌ಗಳ ಜಯ; ಪಂದ್ಯಶ್ರೇಷ್ಠ: ಬಾಬರ್ ಆಜಂ. ಮುಂದಿನ ಪಂದ್ಯ: ಇಂದು (ಭಾನುವಾರ). ಆರಂಭ: ಸಂಜೆ 4ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT