ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್: ಚೆಟ್ರಿ, ಸಿಲ್ವಾ ಕಾಲ್ಚಳಕಕ್ಕೆ ಒಲಿದ ಜಯ

ಅಜೇಯ ಓಟ ಮುಂದುವರಿಸಿದ ಬೆಂಗಳೂರು ಎಫ್‌ಸಿ
Last Updated 17 ಡಿಸೆಂಬರ್ 2020, 19:46 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್: ನಾಯಕ ಸುನಿಲ್ ಚೆಟ್ರಿ ಮತ್ತು ಕ್ಲೇಟನ್ ಸಿಲ್ವಾ ಕಾಲ್ಚಳಕದ ನೆರವಿನಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ತನ್ನ ಜಯದ ಓಟವನ್ನು ಮುಂದುವರಿಸಿತು.

ಜಿಎಂಸಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ 2–1ರಿಂದ ಒಡಿಶಾ ಎಫ್‌ಸಿ ತಂಡವನ್ನು ಮಣಿಸಿತು.

ಪಂದ್ಯದ ಆರಂಭದಿಂದಲೂ ಬಿಎಫ್‌ಸಿಯ ದಾಳಿಯನ್ನು ತಡೆಯುವಲ್ಲಿ ಒಡಿಶಾ ಯಶಸ್ವಿಯಾಗಿತ್ತು. ಆದರೆ ನುರಿತ ಸ್ಟ್ರೈಕರ್ ಸುನಿಲ್ ಚೆಟ್ರಿ ಎದುರಾಳಿ ರಕ್ಷಣಾ ಗೋಡೆಯನ್ನು ನುಚ್ಚುನೂರು ಮಾಡಿದರು. 38ನೇ ನಿಮಿಷದಲ್ಲಿ ಗೋಲು ಹೊಡೆದು ಎದುರಾಳಿಗಳಿಗೆ ಆಘಾತ ನೀಡಿದರು.

ನಂತರದ ಒಡಿಶಾ ತಂಡದ ದಾಳಿಯನ್ನು ಬಹಳ ಹೊತ್ತು ತಡೆಹಿಡಿಯುವಲ್ಲಿಯೂ ಚೆಟ್ರಿ ಬಳಗವು ಯಶಸ್ವಿಯಾಗಿತ್ತು. 71ನೇ ನಿಮಿಷದಲ್ಲಿ ಒಡಿಶಾದ ಸ್ಟೀವನ್ ಟೇಲರ್ ತಿರುಗೇಟು ಕೊಟ್ಟರು. ಇದರಿಂದಾಗಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿದವು.

ಒಡಿಶಾದ ಸಂತಸವು ಕೇವಲ ಎಂಟು ನಿಮಿಷ ಮಾತ್ರ ಇತ್ತು. 79ನೇ ನಿಮಿಷದಲ್ಲಿ ಚುರುಕಾದ ಆಟವಾಡಿದ ಸಿಲ್ವಾ ಮತ್ತೊಂದು ಗೋಲು ಹೊಡೆದು ಬಿಎಫ್‌ಸಿಗೆ ಮುನ್ನಡೆ ಒದಗಿಸಿದರು. ಡಿ ಬ್ರೌನ್‌ ನೀಡಿದ ನಿಖರವಾದ ಪಾಸ್‌ನಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಸಿಲ್ವಾ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಗೋಲ್‌ಕೀಪರ್ ಆರ್ಷದೀಪ್ ಸಿಂಗ್ ಕೈ ಕೈ ಹಿಸುಕಿಕೊಂಡರು.

ಟೂರ್ನಿಯಲ್ಲಿ ಒಟ್ಟು ಆರು ಪಂದ್ಯಗಳನ್ನು ಆಡಿರುವ ಬಿಎಫ್‌ಸಿಯು ಮೂರು ಜಯ ಮತ್ತು ಮೂರು ಡ್ರಾ ಸಾಧಿಸಿದೆ. ಒಟ್ಟು 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಒಡಿಶಾ ಹತ್ತನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT