ನಾಟಿಂಗ್ಹ್ಯಾಮ್ (ಇಂಗ್ಲೆಂಡ್): ಇಂಗ್ಲೆಂಡ್ ತಂಡ ಏಕೈಕ ಕ್ರಿಕೆಟ್ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಜಿಂಬಾಬ್ವೆ ತಂಡವನ್ನು ಇನಿಂಗ್ಸ್ ಮತ್ತು 45 ರನ್ಗಳಿಂದ ಸೋಲಿಸಿತು. ಆಫ್ ಬ್ರೇಕ್ ಬೌಲರ್ ಶೋಯೆಬ್ ಬಶೀರ್ (62ಕ್ಕೆ3 ಮತ್ತು 81ಕ್ಕೆ6) ಪಂದ್ಯದಲ್ಲಿ 9 ವಿಕೆಟ್ ಪಡೆದು ಗೆಲುವಿನಲ್ಲಿ ಮಿಂಚಿದರು.

ಪಂದ್ಯದ ಮೊದಲ ದಿನದಾಟದಲ್ಲಿ (ಗುರುವಾರ) ಇಂಗ್ಲೆಂಡ್ ತಂಡವು ತವರಿನಲ್ಲಿ ದಾಖಲೆಯ ಅತ್ಯಧಿಕ (3 ವಿಕೆಟ್ಗೆ 498) ಮೊತ್ತ ದಾಖಲಿಸಿತ್ತು. ಆದರೆ 22 ವರ್ಷಗಳ ನಂತರ ಇಂಗ್ಲೆಂಡ್ನಲ್ಲಿ ಆಡಿದ ಜಿಂಬಾಬ್ವೆ ಸ್ವಲ್ಪ ಪ್ರತಿರೋಧ ತೋರಿತು. ವೇಗಿ ರಿಚರ್ಡ್ ನರಾವ ಅವರು ಬೆನ್ನುನೋವಿನಿಂದ 9 ಓವರ್ ಅಷ್ಟೇ ಮಾಡಿ ನಿರ್ಗಮಿಸಿದ್ದರು. ಆದರೆ ಮೊದಲ ಇನಿಂಗ್ಸ್ನಲ್ಲಿ ಬ್ರಿಯಾನ್ ಬೆನೆಟ್ (139) ಮತ್ತು ಎರಡನೇ ಇನಿಂಗ್ಸ್ನಲ್ಲಿ ಸಿಯಾನ್ ವಿಲಿಯಮ್ಸ್ (88) ಅವರು ಇಂಗ್ಲೆಂಡ್ ದಾಳಿಗೆ ಎದೆಯೊಡ್ಡಿದರು.

ಸ್ಕೋರುಗಳು:

ಮೊದಲ ಇನಿಂಗ್ಸ್: ಇಂಗ್ಲೆಂಡ್: 6 ವಿಕೆಟ್ಗೆ 565 ಡಿ; ಜಿಂಬಾಬ್ವೆ: 63.2 ಓವರುಗಳಲ್ಲಿ 265 ಮತ್ತು ಎರಡನೇ ಇನಿಂಗ್ಸ್: (ಫಾಲೊಆನ್) 59 ಓವರುಗಳಲ್ಲಿ 255.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.