ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ

Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈನ ಮಾಜಿ ಮಧ್ಯಮ ವೇಗದ ಬೌಲರ್ ಅಜಿತ್‌ ಅಗರ್ಕರ್‌ ಅವರನ್ನು ಭಾರತ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಂಗಳವಾರ ನೇಮಕ ಮಾಡಲಾಗಿದೆ.

ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಶಿಫಾರಸಿನ ಮೇರೆಗೆ ಅವರ ನೇಮಕ ಮಾಡಲಾಗಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್‌ ಶಾ ಪ್ರಕಟಿಸಿದರು.

ಸುಲಕ್ಷಣಾ ನಾಯಕ್‌, ಅಶೋಕ್‌ ಮಲ್ಹೋತ್ರಾ ಮತ್ತು ಜತಿನ್‌ ಪರಾಂಜಪೆ ಅವರಿದ್ದ ಸಮಿತಿ ಒಬ್ಬ ಆಯ್ಕೆಗಾರ ಸ್ಥಾನದ ಅರ್ಜಿಗಳನ್ನು ಪರಿಶೀಲಿಸಿ ಸಂದರ್ಶನ ನಡೆಸಿತು. ನಂತರ ಸರ್ವಾನುಮತದಿಂದ ಅಗರ್ಕರ್‌ ಅವರ ಆಯ್ಕೆ ಪ್ರಕಟಿಸಿತು ಎಂದು ಶಾ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಂತರ ಅವರನ್ನು ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೂ ಶಿಫಾರಸು ಮಾಡಿತು.

ಅಗರ್ಕರ್‌ 191 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 26 ಟೆಸ್ಟ್‌ಗಳಲ್ಲಿ ಮತ್ತು ನಾಲ್ಕು ಟಿ–20 ಪಂದ್ಯಗಳಲ್ಲೂ ಆಡಿದ್ದಾರೆ. ಅವರು 1999, 2003 2007ರ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಂಡ ಭಾರತ ತಂಡದಲ್ಲಿ ಆಡಿದ್ದರು. ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯವೊಂದರಲ್ಲಿ ಶತಕ ಹೊಡೆದಿರುವುದು ವಿಶೇಷ.

ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಗರ್ಕರ್‌ ಈ ಹಿಂದಿನವರಿಗಿಂತ ಹೆಚ್ಚಿನ ಸಂಭಾವನೆ ಪಡೆಯಲಿದ್ದಾರೆ. ಅವರು ₹ 1ಕೋಟಿ ಪಡೆಯಲಿದ್ದಾರೆ. ಉಳಿದ ಆಯ್ಕೆಗಾರರು ₹ 90 ಲಕ್ಷ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT