ಮುಂಬೈ: ಮಹಿಳೆಯರ ಕ್ರಿಕೆಟ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಚೊಚ್ಚಲ ಆವೃತ್ತಿಯ ಐದು ತಂಡಗಳ ಮಾರಾಟದಿಂದ ಬಿಸಿಸಿಐ ₹4669.99ಕೋಟಿ ಆದಾಯ ಗಳಿಸಿದೆ.

ಅದಾನಿ ಸಮೂಹದ ಅದಾನಿ ಸ್ಫೋರ್ಟ್ ಲೈನ್ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿದ್ದು, ₹1,289 ಕೋಟಿ ನೀಡಿ ತಂಡವನ್ನು ಖರೀದಿಸಿದೆ.

ಅಹಮದಾಬಾದ್ ಫ್ರಾಂಚೈಸಿ ಅದಾನಿ ಸಮೂಹದ ಪಾಲಾಗಿದ್ದು, ಪುರುಷರ ಐಪಿಎಲ್ನ ಮುಂಬೈ ಇಂಡಿಯನ್ಸ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ಕ್ರಮವಾಗಿ ₹ 912.99 ಕೋಟಿ, ₹ 901 ಕೋಟಿ ಮತ್ತು ₹ 810 ನೀಡಿ ತಂಡಗಳನ್ನು ಖರೀದಿಸುವ ಮೂಲಕ ಡಬ್ಲ್ಯುಪಿಎಲ್ಗೆ ಪ್ರವೇಶ ಪಡೆದಿದ್ದಾರೆ.

ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ₹757 ಕೋಟಿಗೆ ಲಖನೌ ಫ್ರಾಂಚೈಸಿ ಪಡೆದುಕೊಂಡಿದೆ.

ಈ ತಿಂಗಳ ಆರಂಭದಲ್ಲಿ ಬಿಸಿಸಿಐ ₹951 ಕೋಟಿಗೆ ಮಾಧ್ಯಮ ಪ್ರಸಾರ ಹಕ್ಕನ್ನು ವಯಕಾಮ್18ಗೆ ಮಾರಾಟ ಮಾಡಿತ್ತು. ಪ್ರತಿ ಪಂದ್ಯಕ್ಕೆ ₹7.09 ಕೋಟಿಯಂತೆ ಐದು ವರ್ಷಗಳಿಗೆ ಈ ಹರಾಜು ನಡೆದಿತ್ತು.

‘ಇಂದು ಕ್ರಿಕೆಟ್ ಇತಿಹಾಸದಲ್ಲೇ ಐತಿಹಾಸಿಕ ದಿನವಾಗಿದ್ದು, ಚೊಚ್ಚಲ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ತಂಡಗಳ ಹರಾಜು ಮೊತ್ತವು 2008ರ ಪುರುಷರ ಐಪಿಎಲ್ ತಂಡಗಳ ಹರಾಜು ಮೊತ್ತವನ್ನು ಮೀರಿ ದಾಖಲೆ ಬರೆದಿದೆ. ಐದು ತಂಡಗಳು ₹4669.99 ಕೋಟಿಗೆ ಬಿಕರಿಯಾಗಿವೆ’ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.