ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್‌ಗೆ ಬಿಸಿಸಿಐ ಬಿಡ್

Last Updated 21 ಜೂನ್ 2021, 1:22 IST
ಅಕ್ಷರ ಗಾತ್ರ

ನವದೆಹಲಿ: ಒಂದು ಚಾಂಪಿಯನ್ಸ್‌ ಟ್ರೋಫಿ, ಟಿ20 ಮತ್ತು ಏಕದಿನ ವಿಶ್ವಕಪ್ ಟೂರ್ನಿಗಳಿಗೆ ಆತಿಥ್ಯ ವಹಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಡ್ ಸಲ್ಲಿಸಲಿದೆ.

ಭಾನುವಾರ ನಡೆದ ಬಿಸಿಸಿಐ ಅಪೆಕ್ಸ್‌ ಸಮಿತಿಯ ವರ್ಚುವಲ್ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಯಿತು.

‘2025ರ ಚಾಂಪಿಯನ್ಸ್‌ ಟ್ರೋಫಿ, 2028ರ ಟ್ವೆಂಟಿ–20 ವಿಶ್ವಕಪ್ ಮತ್ತು 2031ರ ಏಕದಿನ ವಿಶ್ವಕಪ್ ಟೂರ್ನಿಗಳನ್ನು ಆಯೋಜಿಸಲು ಮಂಡಳಿಯು ಬಿಡ್ ಸಲ್ಲಿಸಲಿದೆ. ಇದಕ್ಕೆ ಅಪೆಕ್ಸ್‌ ಸಮಿತಿಯು ಸಹಮತ ಸೂಚಿಸಿದೆ. 2024ರಿಂದ ಆರಂಭವಾಗುವ ಎಂಟು ವರ್ಷಗಳ ಕಾರ್ಯವೃತ್ತದ ವೇಳಾಪಟ್ಟಿ ಅಂಗವಾಗಿ ಈ ಬಿಡ್ ಸಲ್ಲಿಕೆಯಾಗಲಿವೆ‘ ಎಂದುಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿಯು ಕಿರಿದಾಗಿರುತ್ತದೆ. ಆದರೆ, ಈ ಟೂರ್ನಿಯು ಬಹಳ ಜನಪ್ರಿಯವಾಗಿದೆ. 2023ರಲ್ಲಿ ಭಾರತವು ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿದೆ. ಆದ್ದರಿಂದ ಅದರ ನಂತರದ ಟೂರ್ನಿಗಳಿಗೆ ನಾವು ಬಿಡ್ ಸಲ್ಲಿಸುತ್ತಿದ್ದೇವೆ‘ ಎಂದು ತಿಳಿಸಿದರು.

ರಣಜಿ ಟೂರ್ನಿ ಸಮಿತಿ ರಚನೆ: ಕೋವಿಡ್ ಕಾರಣದಿಂದಾಗಿ ಹೋದ ವರ್ಷ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT