ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ರಾಜ್ಯ ಮಹಿಳಾ ತಂಡಕ್ಕೆ ಗೆಲುವು

Last Updated 19 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಉನಾ (ಹಿಮಾಚಲ ಪ್ರದೇಶ): ಎಡಗೈ ಸ್ಪಿನ್ನರ್‌ ಸಹನಾ ಎಸ್‌.ಪವಾರ್‌ (20ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡ, ಬಿಸಿಸಿಐ ಸೀನಿಯರ್‌ ಮಹಿಳಾ ಏಕದಿನ ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಬುಧವಾರ ಹಿಮಾಚಲ ಪ್ರದೇಶ ತಂಡವನ್ನು 83 ರನ್‌ಗಳಿಂದ ಸೋಲಿಸಿತು.

ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಆಡಬೇಕಾಗಿ ಬಂದ ಕರ್ನಾಟಕ 50 ಓವರುಗಳಲ್ಲಿ 8 ವಿಕೆಟ್‌ಗೆ 235 ರನ್ ಗಳಿಸಿತು. ರಕ್ಷಿತಾ ಕೆ. (5 ಬೌಂಡರಿಗಳಿದ್ದ 58, 110 ಎ) ಮತ್ತು ಸಿ. ಪ್ರತ್ಯೂಷಾ (13 ಬೌಂಡರಿಗಳಿದ್ದ 77, 85 ಎಸೆತ) ಅವರ ಅರ್ಧ ಶತಕಗಳ ಕೊಡುಗೆ ನೀಡಿದರು. ಮಾತ್ರವಲ್ಲ, ನಾಲ್ಕನೇ ವಿಕೆಟ್‌ಗೆ 117 ರನ್‌ಗಳ ಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಇದಕ್ಕೆ ಉತ್ತರವಾಗಿ ಆತಿಥೇಯ ತಂಡ 9 ವಿಕೆಟ್‌ಗೆ 152 ರನ್‌ ಗಳಿಸಿ ನಿಗದಿ ಓವರುಗಳನ್ನು ಪೂರೈಸಿತು. ಚಿತ್ರಾ ಸಿಂಗ್‌ ಜಮ್‌ವಾಲ್‌ ಗಳಿಸಿದ 43 ರನ್‌ಗಳೇ ಹಿಮಾಚಲ ಪರ ಅತ್ಯಧಿಕ ಎನಿಸಿತು.

ಸ್ಕೋರುಗಳು: ಕರ್ನಾಟಕ: 50 ಓವರುಗಳಲ್ಲಿ 8 ವಿಕೆಟ್‌ಗೆ 235 (ವನಿತಾ ವಿ.ಆರ್‌.34, ರಕ್ಷಿತಾ ಕೆ. 58, ಪ್ರತ್ಯೂಷಾ ಸಿ. 77; ಅನಿಶಾ ಎ.ಅನ್ಸಾರಿ 28ಕ್ಕೆ2, ತನುಜಾ ಪಿ.ಕನ್ವರ್‌ 58ಕ್ಕೆ3); ಹಿಮಾಚಲ ಪ್ರದೇಶ: 50 ಓವರುಗಳಲ್ಲಿ 8 ವಿಕೆಟ್‌ಗೆ 152 (ಕಶಿಷ್‌ ಎಚ್‌.ವರ್ಮಾ 30, ಚಿತ್ರಾ ಸಿಂಗ್‌ ಜಮ್‌ವಾಲ್‌ 43, ವಂದನಾ ಬಿ.ರಾಣಾ 29; ಸಹನಾ ಎಸ್‌.ಪವಾರ್‌ 20ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT