ಬುಧವಾರ, ಏಪ್ರಿಲ್ 21, 2021
31 °C
20ರಿಂದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿ

ಜಮೈಕಾ ಪ್ರವಾಸ ಕೈಗೊಳ್ಳಲಿರುವ ಅಂಧರ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಅಂಧರ ಕ್ರಿಕೆಟ್ ತಂಡವು ಸೀಮಿತ ಓವರ್‌ಗಳ ಸರಣಿ ಆಡಲು ಜಮೈಕಾಗೆ ತೆರಳಲಿದೆ. ಹಾಲಿ ವಿಶ್ವ ಚಾಂಪಿಯನ್‌ ಭಾರತ ತಂಡ, ಜಮೈಕಾ ತಂಡದ ವಿರುದ್ಧ ಮೂರು ಏಕದಿನ ‍ಹಾಗೂ ಎರಡು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

ಜುಲೈ 20ರಂದು ಮೊದಲ ಏಕದಿನ ಪಂದ್ಯ ನಿಗದಿಯಾಗಿದೆ. ಮರುದಿನ ಎರಡನೇ ಪಂದ್ಯ ನಡೆಯಲಿದೆ. ಜುಲೈ 24 ರಂದು ಮೊದಲ ಟ್ವೆಂಟಿ–20 ಪಂದ್ಯ ಹಾಗೂ ಮೂರನೇ ಏಕದಿನ ಪಂದ್ಯ ಜುಲೈ 25ರಂದು ನಡೆಯಲಿದೆ. 27 ರಂದು ಎರಡನೇ ಹಾಗೂ ಕೊನೆಯ ಟ್ವೆಂಟಿ–20 ಪಂದ್ಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಂಡ ಇಂತಿದೆ: ಬಿ1 ವರ್ಗ: ಅಮೋಲ್‌ ಕರ್ಚೆ, ಮೊಹಮದ್‌ ಜಾಫರ್‌ ಇಕ್ಬಾಲ್‌, ಬಸಪ್ಪ ವಡ್ಡಗೋಳ, ಸೋನು ಗೋಲ್ಕರ್‌ ಮತ್ತು ಚಂದ್ರಶೇಖರ್ ಕೆ.ಎನ್‌.

ಬಿ2 ವರ್ಗ: ಅಜಯ್‌ ಕುಮಾರ್‌ ರೆಡ್ಡಿ (ನಾಯಕ), ಡಿ ವೆಂಕಟೇಶ್‌ ಮತ್ತು ಸುರ್ಜಿತ್‌ ಗಾರಾ. ಬಿ3 ವರ್ಗ: ಸುನೀಲ್‌ ರಮೇಶ್‌, ದುರ್ಗಾ ರಾವ್‌, ಪಂಕಜ್‌ ಭುವೆ ಮತ್ತು ದೀಪಕ್‌ ಮಲಿಕ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು