ಮಂಗಳವಾರ, ಮಾರ್ಚ್ 28, 2023
32 °C

ಐಪಿಎಲ್‌ ಫ್ರಾಂಚೈಸಿ ಪಂಜಾಬ್‌ ಕಿಂಗ್ಸ್‌ಗೆ ಬ್ರಾಡ್‌ ಹಡಿನ್‌ ಸಹಾಯಕ ಕೋಚ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಸ್ಟ್ರೇಲಿಯಾದ ವಿಕೆಟ್ ಕೀಪರ್‌ ಬ್ಯಾಟರ್‌ ಬ್ರಾಡ್‌ ಹಡಿನ್‌ ಅವರು ಐಪಿಎಲ್‌ ಫ್ರಾಂಚೈಸಿ ಪಂಜಾಬ್‌ ಕಿಂಗ್ಸ್‌ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಪಂಜಾಬ್‌ ತಂಡ ಈಚೆಗೆ ಅನಿಲ್‌ ಕುಂಬ್ಳೆ ಜಾಗದಲ್ಲಿ ಟ್ರೆವರ್‌ ಬೇಲಿಸ್‌ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಿತ್ತು. ಇದೀಗ ಅವರಿಗೆ ನೆರವಾಗಲು 44 ವರ್ಷದ ಹಡಿನ್‌ ನೇಮಕ ನಡೆದಿದೆ.

‘ಹಡಿನ್‌ ಅವರನ್ನು ಸಹಾಯಕ ಕೋಚ್‌ ಅಗಿ ನೇಮಕ ಮಾಡಲಾಗಿದ್ದು, ಇತರ ಸಿಬ್ಬಂದಿಯ ನೇಮಕ ಶೀಘ್ರದಲ್ಲೇ ನಡೆಯಲಿದೆ’ ಎಂದು ತಂಡದ ಮೂಲಗಳು ತಿಳಿಸಿವೆ.

ಹಡಿನ್‌ ಮತ್ತು ಬೇಲಿಸ್‌ ಅವರು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಜತೆಯಾಗಿ ಕಾರ್ಯನಿರ್ವಹಿಸಿದ್ದರು. ಹಡಿನ್‌ ಆಸ್ಟ್ರೇಲಿಯಾ ಪರ 66 ಟೆಸ್ಟ್‌, 126 ಏಕದಿನ ಮತ್ತು 34 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಪಂಜಾಬ್‌ ತಂಡ ಕುಂಬ್ಳೆ ಅಲ್ಲದೆ, ಸಹಾಯಕ ಕೋಚ್‌ ಜಾಂಟಿ ರೋಡ್ಸ್‌ ಮತ್ತು ಬೌಲಿಂಗ್‌ ಕೋಚ್ ಡೇಮಿಯನ್‌ ರೈಟ್‌ ಅವರೊಂದಿಗಿನ ಒ‍ಪ್ಪಂದವನ್ನು ನವೀಕರಿಸಿರಲಿಲ್ಲ. ಕಳೆದ ಮೂರು ಋತುಗಳ ಟೂರ್ನಿಗಳಲ್ಲಿ ತಂಡ ‘ಪ್ಲೇ ಆಫ್‌’ ಪ್ರವೇಶಿಸಲು ವಿಫಲವಾಗಿತ್ತು. ಆದ್ದರಿಂದ ಕೋಚ್‌ ಹಾಗೂ ಸಹಾಯಕ ಸಿಬ್ಬಂದಿಯನ್ನು ಬದಲಿಸಲು ಫ್ರಾಂಚೈಸಿ ನಿರ್ಧರಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು