ಕ್ರೈಸ್ಟ್ಚರ್ಚ್, ನ್ಯೂಜಿಲೆಂಡ್ (ಎಎಫ್ಪಿ): ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲಿರುವ ಬ್ಯಾಟರ್ ರಾಸ್ ಟೇಲರ್ ಅವರಿಗೆ ಗೆಲುವಿನ ಕಾಣಿಕೆ ನೀಡಲು ಸಜ್ಜಾಗಿರುವ ನ್ಯೂಜಿಲೆಂಡ್ ಭಾನುವಾರ ಆರಂಭವಾಗಲಿರುವ ಎರಡನೇ ಟೆಸ್ಟ್ನಲ್ಲಿ ಬಾಂಗ್ಲಾದೇಶಕ್ಕೆ ತಿರುಗೇಟು ನೀಡುವ ಸಿದ್ಧತೆಯಲ್ಲಿದೆ. ಮೊದಲ ಪಂದ್ಯದಲ್ಲಿ ಅಮೋಘ ಜಯ ಗಳಿಸಿರುವ ಬಾಂಗ್ಲಾದೇಶ ಈ ಪಂದ್ಯವನ್ನು ಕೂಡ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ.

ಹ್ಯಾಗ್ಲಿ ಓವಲ್ನಲ್ಲಿ ಈ ಪಂದ್ಯ ನಡೆಯಲಿದೆ. ಇದು ಪ್ರವಾಸಿ ತಂಡಕ್ಕೆ ಅತ್ಯಂತ ಕಠಿಣ ಅಂಗಣ ಎಂಬುದರಿಂದ ಬಾಂಗ್ಲಾದೇಶ ಯಾವ ತಂತ್ರಗಳಿಗೆ ಮೊರೆ ಹೋಗುತ್ತದೆ ಎಂಬುದು ಕುತೂಹಲದ ವಿಷಯ. ಆದರೆ ಹ್ಯಾಗ್ಲಿ ಓವಲ್ನಲ್ಲಿ ಪ್ರವಾಸಿ ತಂಡ ಗೆಲುವು ಸಾಧಿಸುವುದು ದುಷ್ಕರ ಎಂಬುದನ್ನು ಒಪ್ಪುವುದಿಲ್ಲ ಎಂದು ಬಾಂಗ್ಲಾದ ಯುವ ಆಟಗಾರರು ಹೇಳಿದ್ದಾರೆ. ಕೋಚ್ ರಸೆಲ್ ಡೊಮಿಂಗೊ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೌಂಟ್ ಮಾಂಗನೂಯಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 8 ವಿಕೆಟ್ಗಳಿಂದ ಜಯ ಗಳಿಸಿತ್ತು. ಎರಡನೇ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ನ್ಯೂಜಿಲೆಂಡ್ ಪ್ರಯತ್ನಿಸಲಿದೆ. ಈ ಮೂಲಕ ರಾಸ್ ಟೇಲರ್ ಅವರಿಗೆ ಶುಭ ವಿದಾಯ ಕೋರಲು ತಂಡ ಯೋಜನೆ ಹಾಕಿಕೊಂಡಿದೆ ಎಂದು ನಾಯಕ ಟಾಮ್ ಲಥಾಮ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.