ಗುರುವಾರ , ಮೇ 19, 2022
24 °C
ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ

ಭಾರತದ ವಿರುದ್ಧ ಟಿ20 ಸರಣಿಗೆ ಜಾನಿ ಬೆಸ್ಟೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್ (ಪಿಟಿಐ): ಅನುಭವಿ ಬ್ಯಾಟ್ಸ್‌ಮನ್ ಜಾನಿ ಬೆಸ್ಟೊ ಮತ್ತು ವಿಕೆಟ್‌ಕೀಪರ್ ಜೋಸ್ ಬಟ್ಲರ್ ಅವರು ಭಾರತದ ವಿರುದ್ಧ ನಡೆಯಲಿರುವ ಟಿ20 ಕ್ರಿಕೆಟ್ ಸರಣಿಯಲ್ಲಿ ಆಡುವ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಸಂಸ್ಥೆಯು ಗುರುವಾರ 16 ಆಟಗಾರರ ತಂಡವನ್ನು ಪ್ರಕಟಿಸಿದೆ. ಅಹಮದಾಬಾದಿನಲ್ಲಿ ಮಾರ್ಚ್‌ 12 ರಿಂದ 20ರವರೆಗೆ ಐದು ಟಿ20 ಪಂದ್ಯಗಳ ಸರಣಿ  ಆಯೋಜನೆಗೊಂಡಿದೆ.

ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ಬಟ್ಲರ್ ಅವರು ಕೌಟುಂಬಿಕ ಕಾರಣಗಳಿಗಾಗಿ ಸ್ವದೇಶಕ್ಕೆ ಮರಳಿದ್ದರು. ಜಾನಿ ಬೆಸ್ಟೊ ಅವರನ್ನು ಮೊದಲ ಎರಡು ಟೆಸ್ಟ್‌ಗಳಿಗೆ ವಿಶ್ರಾಂತಿ ನೀಡಲಾಗಿದೆ.

ಸೀಮಿತ ಓವರ್‌ಗಳ ಸರಣಿಯಲ್ಲಿ ತಂಡದ ನಾಯಕತ್ವವನ್ನು ಏಯಾನ್ ಮಾರ್ಗನ್ ವಹಿಸುವರು.

ತಂಡ ಇಂತಿದೆ:   ಏಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜೋಫ್ರಾ ಆರ್ಚರ್, ಜೋನಾಥನ್ ಬೆಸ್ಟೊ, ಸ್ಯಾಮ್ ಬಿಲ್ಲಿಂಗ್ಸ್‌, ಜೊಸ್ ಬಟ್ಲರ್, ಸ್ಯಾಮ್ ಕರನ್, ಟಾಮ್ ಕರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೆವಿಡ್ ಮಲಾನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್‌, ರೀಸ್ ಟಾಪ್ಲೆ, ಮಾರ್ಕ್ ವುಡ್.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು