ಗುರುವಾರ , ಮೇ 19, 2022
23 °C

ಮುಂಬೈ ಇಂಡಿಯನ್ಸ್‌ ಪೋಷಾಕು ಧರಿಸುವ ತವಕ: ಅರ್ಜುನ್ ತೆಂಡೂಲ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ:  ಮುಂಬೈ ಇಂಡಿಯನ್ಸ್‌ ತಂಡದ ಪೋಷಾಕು ಧರಿಸಲು ಉತ್ಸುಕನಾಗಿದ್ದೇನೆ. ಇದೊಂದು ಅಪೂರ್ವ ಅವಕಾಶವಾಗಿದೆ ಎಂದು ಕ್ರಿಕೆಟಿಗ ಅರ್ಜುನ್ ಸಚಿನ್ ತೆಂಡೂಲ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್ –14 ಹರಾಜು ಪ್ರಕ್ರಿಯೆಯಲ್ಲಿ  ಮುಂಬೈ ಇಂಡಿಯನ್ಸ್‌ ತಂಡವು ಅರ್ಜುನ್ ಅವರನ್ನು ಮೂಲಬೆಲೆ (₹ 20 ಲಕ್ಷ)ಗೆ ಖರೀದಿಸಿತ್ತು.

’ನನ್ನ ಬಾಲ್ಯದಿಂದಲೂ ಮುಂಬೈ ಇಂಡಿಯನ್ಸ್ ತಂಡದ ಆಟವನ್ನು ಹತ್ತಿರದಿಂದ ಗಮನಿಸಿದ್ದೇನೆ. ಅದರಿಂದ ಸಿಕ್ಕ ಪ್ರೇರಣೆ ಬಹಳ ದೊಡ್ಡದು. ನನ್ನನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ತಂಡದ ಕೋಚ್ ಮತ್ತು ನೆರವು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ‘ ಎಂದು ಅರ್ಜುನ್ ಹೇಳಿದ್ದಾರೆ.

21 ವರ್ಷದ ಎಡಗೈ ಆಲ್‌ರೌಂಡರ್ ಅರ್ಜುನ್  ತಂದೆ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್  ಕೂಡ ಇದೇ ತಂಡದಲ್ಲಿ ಆಡಿದ್ದರು.  ಕಳೆದ  ಎರಡು–ಮೂರು ಋತುಗಳಿಂದ ಅರ್ಜುನ್ ಅವರು ಮುಂಬೈ ಇಂಡಿಯನ್ಸ್‌ ಫ್ರ್ಯಾಂಚೈಸ್‌ನ ನೆಟ್ಸ್‌ ಬೌಲರ್‌ ಆಗಿದ್ದಾರೆ. 

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅವರು ಮುಂಬೈ ತಂಡದಲ್ಲಿ ಪದಾರ್ಪಣೆ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು