ಮೈಸೂರು: ಯುವ ಬ್ಯಾಟರ್ ಸಮಿತ್ ದ್ರಾವಿಡ್ ಅವರು ಒಡಿಶಾ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯದ ಮೊದಲ ದಿನ ಶತಕದ ಹೊಸ್ತಿಲಲ್ಲಿ ಎಡವಿದರೂ ಕೆಎಸ್‌ಸಿಎ ಕೋಲ್ಟ್ಸ್ ತಂಡಕ್ಕೆ ಆಸರೆಯಾದರು.

ಇಲ್ಲಿನ ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಕೋಲ್ಟ್ಸ್ ದಿನದ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು.

66 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸಮಿತ್, ಆರಂಭದಲ್ಲಿ ತಾಳ್ಮೆಯ ಆಟವಾಡಿದರು. ನಂತರ ರನ್ ವೇಗ ಹೆಚ್ಚಿಸಿಕೊಂಡರು. ಮೈದಾನದ ಮೂಲೆಮೂಲೆಗೂ ಚೆಂಡನ್ನು ಬಾರಿಸಿದ ಅವರು, 16 ಬೌಂಡರಿ ಗಳಿಸಿದರು. 91 ರನ್ ಗಳಿಸಿದ ಅವರು ಶತಕದತ್ತ ಸಾಗಿದ್ದರು. ಆದರೆ 52ನೇ ಓವರ್‌ನಲ್ಲಿ ಸುನಿಲ್ ರೌಲ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆಗಿ ನಿರಾಸೆ ಅನುಭವಿಸಿದರು.

ಸಮಿತ್ ಹಾಗೂ ಪಿ. ಧ್ರುವ್ (ಔಟಾಗದೇ 63) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 101 ರನ್ ಸೇರಿ ಸಿದರು. ಆ ಮೂಲಕ ಕರ್ನಾಟಕವು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಬ್ಬರದ ಆಟದ ಮೊರೆ ಹೋದ ನಾಯಕ ಶುಭಾಂಗ್ ಹೆಗ್ಡೆ 2 ಸಿಕ್ಸರ್ ಸಹಿತ 35 ರನ್ ಕಾಣಿಕೆ ನೀಡಿದರು. ಒಡಿಶಾ ಕ್ರಿಕೆಟ್ ಸಂಸ್ಥೆಯ ವೇಗಿ ಸೂರ್ಯ ಕಾಂತ್ ಪ್ರಧಾನ್ ಮೂರು ವಿಕೆಟ್ ಉರುಳಿಸಿದರು.

ಮೊದಲ ದಿನವೇ 14 ವಿಕೆಟ್: ಮಾನಸಗಂಗೋತ್ರಿಯ ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ಆರಂಭಗೊಂಡ ಬರೋಡಾ ಕ್ರಿಕೆಟ್ ಸಂಸ್ಥೆ ಹಾಗೂ ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ ನಡುವಿನ ಪಂದ್ಯದ ಮೊದಲ ದಿನವೇ 14 ವಿಕೆಟ್ ಉರುಳಿಸಿದ್ದು, ಕುತೂಹಲದ ಘಟ್ಟ ತಲುಪಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಬರೋಡಾ ತಂಡ 181 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. 64 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಿನಾದ್ ರಥ್ವ (33) ಹಾಗೂ ಅತೀತ್ ಶೇಠ್ (48) 6 ವಿಕೆಟ್‌ಗೆ 81 ರನ್‌ಗಳ ಜೊತೆಯಾಟದ ಮೂಲಕ ಆಸರೆ ಆದರು. ಕರ್ಶ್ ಕೊಠಾರಿ 45 ರನ್‌ಗಳಿಗೆ 4 ವಿಕೆಟ್ ಉರುಳಿಸಿದರು. ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿಯು ದಿನದಂತ್ಯಕ್ಕೆ ಕೇವಲ 28 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದು, ಸಂಕಷ್ಟದಲ್ಲಿದೆ.

ಸಂಕ್ಷಿಪ್ತ ಸ್ಕೋರ್: ಎಸ್‌ಜೆಸಿಇ ಕ್ರೀಡಾಂಗಣ: ಕೆಎಸ್‌ಸಿಎ ಕೋಲ್ಟ್ಸ್: 84 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 310 (ಸಮಿತ್ ದ್ರಾವಿಡ್ 91, ಪಿ. ಧ್ರುವ್ ಔಟಾಗದೇ 63, ಶುಭಾಂಗ್ ಹೆಗ್ಡೆ 35, ಕೆ.ಪಿ. ಕಾರ್ತಿಕೇಯ 27. ಸೂರ್ಯಕಾಂತ್ ಪ್ರಧಾನ್ 46ಕ್ಕೆ 3, ಸುನಿಲ್ ರೌಲ್ 50ಕ್ಕೆ 2). ಗಂಗೋತ್ರಿ ಗ್ಲೇಡ್ಸ್: ಬರೋಡಾ ಕ್ರಿಕೆಟ್ ಸಂಸ್ಥೆ: 68.2 ಓವರ್‌ಗಳಲ್ಲಿ 181 ( ನಿನಾದ್ ರಥ್ವ 33, ಅತೀತ್ ಶೇಠ್ 48, ಪ್ರದೀಪ್ ಯಾದವ್ 28. ಕರ್ಶ್ ಕೊಠಾರಿ 45ಕ್ಕೆ 4, ಪ್ರಿನ್ಸ್ ಬದಿಯಾನಿ 17ಕ್ಕೆ 2), ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: 14.1 ಓವರ್‌ಗಳಲ್ಲಿ 28 ರನ್‌ಗ 4 (ಪ್ರಣವ್ 12, ಪಾರ್ಥ್ ಸಹಾನಿ 14. ಬಾಬಾಸಫಿ ಪಠಾಣ್ 4ಕ್ಕೆ 1).

ಬೆಂಗಳೂರು ಪಂದ್ಯಗಳು: ಐಎಎಫ್ ಮೈದಾನ: ಛತ್ತೀಸಗಡ: 85 ಓವರ್‌ಗಳಲ್ಲಿ 5ಕ್ಕೆ291 (ಆಶುತೋಷ್ ಸಿಂಗ್ 38, ಶಶಾಂಕ್ ಸಿಂಗ್ 129, ಏಕನಾಥ್ ಕೇಳ್ಕರ್ ಔಟಾಗದೆ 67, ಆದಿತ್ಯ ನಾಯರ್ 73ಕ್ಕೆ3) ವಿರುದ್ಧ ಕೆಎಸ್‌ಸಿಎ ಇಲೆವನ್.

ಆಲೂರು ಕೆಎಸ್‌ಸಿಎ ಕ್ರೀಡಾಂಗಣ(2): ಮಹಾರಾಷ್ಟ್ರ: 90 ಓವರ್‌ಗಳಲ್ಲಿ 5ಕ್ಕೆ 345 (ಮುರ್ತಜಾ ಟ್ರಂಕ್‌ವಾಲಾ 85, ಅಂಕಿತ್ ಭವಾನೆ 134, ಅಜೀಂ ಖಾಜಿ 84, ನಿಖಿಲ್ ನಾಯಕ ಔಟಾಗದೇ 22, ಪಾರಸ್ ಗುರುಭಕ್ಷ ಆರ್ಯ 78ಕ್ಕೆ2) ವಿರುದ್ಧ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್.

ಕಿಣಿ ಸ್ಪೋರ್ಟ್ಸ್ ಅರೆನಾ: ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: 90 ಓವರ್‌ಗಳಲ್ಲಿ 6ಕ್ಕೆ280 (ಕಿಶನ್ ಎಸ್ ಬೆದರೆ ಔಟಾಗದೆ 93, ಕೆ.ಎಲ್. ಶ್ರೀಜಿತ್ 37, ಶ್ರೇಯಸ್ ಗೋಪಾಲ್ 49, ಯಶೋವರ್ಧನ್ ಪರಂತಾಪ್ 31, ಅಧೋಕ್ಷ್ ಔಟಾಗದೇ 21, ಜೈ ಮಲುಸಾರೆ 30ಕ್ಕೆ2, ಸರಳ್ ಪ್ರಜಾಪತಿ 74ಕ್ಕೆ3) ಎದುರು ಗುಜರಾತ್.

ಆಲೂರು ಕೆಎಸ್‌ಸಿಎ ಕ್ರೀಡಾಂಗಣ(3): ಮಧ್ಯಪ್ರದೇಶ: 90 ಓವರ್‌ಗಳಲ್ಲಿ2 ವಿಕೆಟ್‌ಗಳಿಗೆ 302 (ಶುಭಾಂಶು ಸೇನಾಪತಿ ಅಜೇಯ 136, ಶುಭಂ ಶರ್ಮಾ 142) ವಿರುದ್ಧ ಗೋವಾ.

ಆರ್‌ಎಸ್‌ಐ: ವಿದರ್ಭ: 86 ಓವರ್‌ಗಳಲ್ಲಿ 5ಕ್ಕೆ317 (ಧ್ರುವ ಶೋರೆ 79, ಸತ್ಯಮ್ ಭೋಯಾರ್ 67, ಅಮನ್ ಮಾಖಡೆ 82, ಯಶ್ ರಾಥೋಡ್ 57, ವಿಪಿ. ದಿರನ್ 42ಕ್ಕೆ3) ಎದುರು ತಮಿಳುನಾಡು.

ಆಲೂರು ಕೆಎಸ್‌ಸಿಎ ಕ್ರೀಡಾಂಗಣ(1): ಆಂಧ್ರ: 88 ಓವರ್‌ಗಳಲ್ಲಿ 6ಕ್ಕೆ 293 (ಎಂ. ಅಭಿಷೇಕ್ 34, ಎಸ್.ಕೆ. ರಶೀದ್ 75, ಅಶ್ವಿನ್ ಹೆಬ್ಬಾರ್ ಅಜೇಯ 89, ರೇವಂತ ರೆಡ್ಡಿ 62, ಮೊಹಮ್ಮದ್ ಜುನೇದ್ ಖಾನ್ 39ಕ್ಕೆ3, ಹಿಮಾಂಶು ಸಿಂಗ್ 56ಕ್ಕೆ2) ಎದುರು ಮುಂಬೈ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.