ಮಂಗಳವಾರ, ಸೆಪ್ಟೆಂಬರ್ 27, 2022
27 °C

ವೀಕ್ಷಕ ವಿವರಣೆಕಾರ ಇಯಾನ್ ಚಾಪೆಲ್‌ ವಿದಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಆಸ್ಟ್ರೇಲಿಯಾ ಕ್ರಿಕೆಟ್‌ನ ದಿಗ್ಗಜ ಆಟಗಾರರಲ್ಲಿ ಒಬ್ಬರಾಗಿರುವ ಇಯಾನ್‌ ಚಾಪೆಲ್‌ ತಮ್ಮ 45 ವರ್ಷಗಳ ವೀಕ್ಷಕ ವಿವರಣೆಕಾರ ವೃತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ರಿಚಿ ಬೆನಾಡ್, ಬಿಲ್‌ ಲಾರಿ ಮತ್ತು ಟೋನಿ ಗ್ರೆಗ್‌ ಅವರೊಂದಿಗೆ ಚಾಪೆಲ್‌ ಅವರು ‘ಚಾನೆಲ್ 9’ಗೆ ಸುದೀರ್ಘ ಅವಧಿಯವರೆಗೆ ವೀಕ್ಷಕ ವಿವರಣೆಕಾರನಾಗಿ ಕೆಲಸ ಮಾಡಿದ್ದಾರೆ.

‘ವೀಕ್ಷಕ ವಿವರಣೆ ವೃತ್ತಿಗೆ ವಿದಾಯ ಹೇಳಲು ಚಿಂತಿಸುತ್ತಿದ್ದೇನೆ’ ಎಂದು 78 ವರ್ಷದ ಅವರು ‘ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌’ಗೆ ಹೇಳಿದ್ದಾರೆ.

‘ಕೆಲ ವರ್ಷಗಳ ಹಿಂದೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದೆ. ಆ ಬಳಿಕ ಪ್ರವಾಸ ಮಾಡುವುದು, ಮೆಟ್ಟಿಲು ಹತ್ತುವುದು, ಕೆಲಸದ ನಿಮಿತ್ತ ಅತ್ತಿತ್ತ ಓಡಾಟ ಎಲ್ಲವೂ ಕಷ್ಟ ಎನಿಸತೊಡಗಿತು. ಆರೋಗ್ಯದ ಮೇಲಿನ ಕಾಳಜಿಯಿಂದ ಈ ತೀರ್ಮಾನಕ್ಕೆ ಬಂದಿದ್ದೇನೆ’ ಎಂದಿದ್ದಾರೆ.

ಅಗ್ರ ಕ್ರಮಾಂಕದ ಬ್ಯಾಟರ್ ಆಗಿದ್ದ ಚಾಪೆಲ್ 1964 ರಿಂದ 1980ರ ವರೆಗಿನ ಅವಧಿಯಲ್ಲಿ 75 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದು, 42.2ರ ಸರಾಸರಿಯಲ್ಲಿ 5,345 ರನ್‌ ಕಲೆಹಾಕಿದ್ದಾರೆ. 30 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

1980 ರಲ್ಲಿ ನಿವೃತ್ತಿಯಾದ ಬಳಿಕ ವೀಕ್ಷಕ ವಿವರಣೆಕಾರನಾಗಿ ಎರಡನೇ ಇನಿಂಗ್ಸ್‌ ಆರಂಭಿಸಿದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು