ಬುಧವಾರ, ಮೇ 18, 2022
25 °C

IPL ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಬಿಕರಿಯಾದ ಮೋರಿಸ್‌: ಬೆಲೆ ಎಷ್ಟು ಗೊತ್ತೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೋರಿಸ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಖರೀದಿಯಾಗಿದ್ದಾರೆ.

33 ವರ್ಷದ ಮೋರಿಸ್‌ ಅವರ ಮೂಲ ಬೆಲೆ ₹ 75 ಲಕ್ಷ. ಆದರೆ, ರಾಜಸ್ಥಾನ್ ರಾಯಲ್ಸ್ ₹ 16.25 ಕೋಟಿಗೆ ಅವರನ್ನು ಖರೀದಿ ಮಾಡಿದೆ.

ಇದನ್ನು ಓದಿ: ಆಟಗಾರರ ಹರಾಜು ಪ್ರಕ್ರಿಯೆಯ ಕ್ಷಣ ಕ್ಷಣದ ಮಾಹಿತಿ 

ಐಪಿಎಲ್‌ನಲ್ಲಿ ಈ ಹಿಂದೆ ಅತ್ಯಂತ ದುಬಾರಿ ಬೆಲೆಗೆ ಬಿಕರಿಯಾದ ಆಟಗಾರ ಯುವರಾಜ್ ಸಿಂಗ್. ಅವರನ್ನು ದೆಹಲಿ ಕ್ಯಾಪಿಟಲ್ಸ್ (ದೆಹಲಿ ಡೇರ್‌ಡೆವಿಲ್ಸ್) 2015 ರಲ್ಲಿ ₹ 16 ಕೋಟಿಗೆ ಖರೀದಿಸಿತ್ತು.

ಆಲ್‌ರೌಂಡರ್ ಕ್ರಿಸ್ ಮೋರಿಸ್ ಈ ಹಿಂದೆ ಆರ್‌ಸಿಬಿ ತಂಡದಲ್ಲಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು