ಬೆಂಗಳೂರು: ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಕೇರಳ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಕರ್ನಾಟಕ ತಂಡವು ಮೊದಲ ಇನಿಂಗ್ಸ್ ಮುನ್ನಡೆಯನ್ನೂ ಸಾಧಿಸಿತು.

ಪಂದ್ಯದ ಕೊನೆಯ ದಿನವಾದ ಮಂಗಳವಾರ ಕರ್ನಾಟಕ ತಂಡವು 382 ರನ್ಗಳ ಗುರಿ ಬೆನ್ನಟ್ಟಿತು. ತಂಡದ ಆರಂಭಿಕ ಬ್ಯಾಟರ್ ಮೆಕ್ನಿಲ್ ನರೋನಾ (103; 162ಎ, 4X6, 6X4) ಮತ್ತು ಪ್ರಖರ್ ಚತುರ್ವೇದಿ (54; 62ಎ, 4X7, 6X1) ಅರ್ಧಶತಕ ಗಳಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 90 ರನ್ ಸೇರಿಸಿದರು. ಇದರಿಂದಾಗಿ ಎದುರಾಳಿ ಬೌಲರ್ಗಳ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಪ್ರಖರ್ ಔಟಾದ ನಂತರ ಕೆ.ಪಿ. ಕಾರ್ತಿಕೇಯ (1ರನ್) ಬೇಗನೆ ನಿರ್ಗಮಿಸಿದರು. ನಾಯಕ ಅನೀಶ್ವರ್ ಗೌತಮ್ (23 ರನ್) ಅವರು ಉತ್ತಮವಾಗಿ ಆಡಿದರು. ತಂಡವು55 ಓವರ್ಗಳಲ್ಲಿ 4 ವಿಕೆಟ್ಗಳಿಗೆ 241 ರನ್ ಗಳಿಸಿದ ಸಂದರ್ಭದಲ್ಲಿ ದಿನದಾಟಕ್ಕೆ ತೆರೆಬಿತ್ತು.

10 ಅಂಕ: ಈ ಬಾರಿಯ ಟೂರ್ನಿಯಲ್ಲಿ ಹೊಸ ಅಂಕ ನೀಡಿಕೆ ಪದ್ಧತಿ ಜಾರಿಯಾಗಿದೆ. ಅದರ ಅನ್ವಯ ಈ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ 10 ಮತ್ತು ಕೇರಳ ತಂಡಕ್ಕೆ 8 ಪಾಯಿಂಟ್ ಲಭಿಸಿವೆ.

ಮೊದಲ ಇನಿಂಗ್ಸ್ ಆದರದಲ್ಲಿ ಕರ್ನಾಟಕಕ್ಕೆ 3 ಮ್ಯಾಚ್ ಪಾಯಿಂಟ್ಸ್ ದೊರೆತಿವೆ. ಕೇರಳಕ್ಕೆ 1 ಅಂಕ ಸಿಕ್ಕಿದೆ. ಉಭಯ ತಂಡಗಳು ತಲಾ 3 ಬ್ಯಾಟಿಂಗ್ ಪಾಯಿಂಟ್ ಪಡೆದಿವೆ ಮತ್ತು ತಲಾ 4 ಬೌಲಿಂಗ್ ಪಾಯಿಂಟ್ ಗಳಿಸಿವೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕೇರಳ: 72.5 ಓವರ್ಗಳಲ್ಲಿ 327. ಕರ್ನಾಟಕ: 88.3 ಓವರ್ಗಳಲ್ಲಿ 340. ಎರಡನೇ ಇನಿಂಗ್ಸ್: ಕೇರಳ: 110.3 ಓವರ್ಗಳಲ್ಲಿ 8ಕ್ಕೆ395. ಕರ್ನಾಟಕ: 55 ಓವರ್ಗಳಲ್ಲಿ 4ಕ್ಕೆ241 (ಮೆಕ್ನಿಲ್ ನರೋನಾ 103, ಪ್ರಖರ್ ಚತುರ್ವೇದಿ 54, ಹರ್ಷಿಲ್ ಧರ್ಮಾನಿ 31, ಅನೀಶ್ವರ್ ಗೌತಮ್ 26,ಎಂ.ಯು. ಹರಿಕೃಷ್ಣನ್ 75ಕ್ಕೆ1, ಎಂ. ಕಿರಣ ಸಾಗರ್ 50ಕ್ಕೆ1) ಫಲಿತಾಂಶ: ಪಂದ್ಯ ಡ್ರಾ. ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಮುನ್ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.