ಮಂಗಳವಾರ, ಜನವರಿ 28, 2020
29 °C

ಡ್ರಾ ಪಂದ್ಯದಲ್ಲಿ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರೀ ಮಳೆಯ ಕಾರಣ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶ ತಂಡಗಳ ನಡುವಿನ 19 ವರ್ಷದೊಳಗಿನವರ ಬಿಸಿಸಿಐ ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌ ಪಂದ್ಯ ಸೋಮವಾರ ಡ್ರಾ ಕಂಡಿತು.

ಹಿಮಾಚಲ ಪ್ರದೇಶದ ಸಂತೋಷ್‌ಗಡದ ಪಿಸಿಪಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತವರಿನ ತಂಡ ಮೊದಲು ಬ್ಯಾಟ್‌ ಮಾಡಿತ್ತು. ಕುಶಾಲ್‌ ಪಾಲ್‌  ಅವರ ಶತಕದ(110) ಬಲದಿಂದ 351 ರನ್‌ ಗಳಿಸಿತ್ತು. ಉತ್ತರವಾಗಿ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ತಂಡ 66.1 ಓವರ್‌ಗಳಲ್ಲಿ 184 ರನ್‌ ಗಳಿಸಿ ಮೂರು ವಿಕೆಟ್‌ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಸುರಿದ ಭಾರೀ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು. ಕರ್ನಾಟಕದ ಅಕ್ವಿಬ್‌ ಜಾವೇದ್‌ 14 ಬೌಂಡರಿ ನೆರವಿನಿಂದ 97 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಹಿಮಾಚಲ ಪ್ರದೇಶ 104.5 ಓವರ್‌ಗಳಲ್ಲಿ 351 ಆಲೌಟ್‌ (ಕುಶಾಲ್‌ ಪಾಲ್‌ 110, ಹರ್ಷ ಜಮ್‌ವಾಲ್‌ 82, ಪೂರಬ್‌ ಜೆ. ಸಿಂಗ್‌ ಔಟಾಗದೆ 54; ಎಲ್‌. ಆರ್‌.ಕುಮಾರ್‌ 59ಕ್ಕೆ 2, ಪಾರಸ್‌ ಗುರುಬಕ್ಷ್‌ ಆರ್ಯ 101ಕ್ಕೆ 3, ಎನ್‌.ಎ. ಚಿನ್ಮಯ್‌ 52ಕ್ಕೆ 2) ಕರ್ನಾಟಕ: 66.1 ಓವರ್‌ಗಳಲ್ಲಿ 3 ವಿಕೆಟ್‌ಗೆ 184 (ಅಕ್ವಿಬ್‌ ಜಾವೇದ್‌ 97, ಲೋಚನ್‌ ಎಸ್‌. ಗೌಡ 37, ಸ್ಮರಣ್‌ ಔಟಾಗದೆ 34; ರಿತಿಕ್‌ ಕುಮಾರ್‌ 37ಕ್ಕೆ 2) ಫಲಿತಾಂಶ: ಪಂದ್ಯ ಡ್ರಾ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು