ಭಾನುವಾರ, ಜೂಲೈ 12, 2020
22 °C

ಆಗಸ್ಟ್‌ ಒಂದರಿಂದ ಕೌಂಟಿ ಕ್ರಿಕೆಟ್‌

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಆಗಸ್ಟ್‌ ಒಂದರಿಂದ ಕೌಂಟಿ ಕ್ರಿಕೆಟ್‌ ಚಾಂಪಿಯನ್‌ಷಿಪ್‌ ನಡೆಸಲು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ನಿರ್ಧರಿಸಿದೆ.

ಈ ಬಾರಿಯ ಪುರುಷರ ಚಾಂಪಿಯನ್‌ಷಿಪ್‌ ಏಪ್ರಿಲ್‌ 12ರಿಂದಲೇ ಆರಂಭವಾಗಬೇಕಿತ್ತು. ಕೊರೊನಾ ಬಿಕ್ಕಟ್ಟು ಸೃಷ್ಟಿಯಾಗಿದ್ದರಿಂದ ಇಂಗ್ಲೆಂಡ್‌ ಸರ್ಕಾರವು ಕ್ರಿಕೆಟ್‌ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿತ್ತು. ಹೀಗಾಗಿ ಚಾಂಪಿಯನ್‌ಷಿಪ್‌ ಅನ್ನು ಮುಂದೂಡಲಾಗಿತ್ತು.

ಜುಲೈ ಆರಂಭದಲ್ಲಿ ನಡೆಯುವ ಸಭೆಯಲ್ಲಿ 18 ಕ್ಲಬ್‌ಗಳ ಜೊತೆ ಚರ್ಚಿಸಿ ಟೂರ್ನಿಯ ಮಾದರಿ ಹಾಗೂ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲು ತೀರ್ಮಾನಿಸಲಾಗಿದೆ. ಈ ವರ್ಷ ನಿಗದಿಯಾಗಿದ್ದ ಮಹಿಳಾ ದೇಶಿಯ ಟೂರ್ನಿಗಳನ್ನು ಆಯೋಜಿಸಲೂ ಇಸಿಬಿ ನಿರ್ಧರಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು