ಬುಧವಾರ, ಜನವರಿ 22, 2020
19 °C
ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯ: ಆಸ್ಟ್ರೇಲಿಯ ಜಯಭೇರಿ

ಸ್ಟಾರ್ಕ್‌, ಲಯನ್‌ ಬೌಲಿಂಗ್‌ ಬಲ: ಆಸ್ಟ್ರೇಲಿಯಕ್ಕೆ ಜಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪರ್ತ್‌, ಆಸ್ಟ್ರೇಲಿಯಾ : ಮಿಷೆಲ್‌ ಸ್ಟಾರ್ಕ್‌ ಹಾಗೂ ‍ನೇಥನ್‌ ಲಯನ್‌ ಅವರ ಬೌಲಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು ಭಾನುವಾರ 296 ರನ್‌ಗಳಿಂದ ಮಣಿಸಿತು. ಗೆಲುವಿಗೆ 468 ರನ್‌ಗಳ ಬೃಹತ್‌ ಗುರಿ ಪಡೆದಿದ್ದ ನ್ಯೂಜಿಲೆಂಡ್‌ ಪಂದ್ಯದ ನಾಲ್ಕನೇ ದಿನವಾದ ಭಾನುವಾರ 171 ರನ್‌ಗಳಿಗೆ ಆಲೌಟ್‌ ಆಯಿತು. ಎರಡನೇ ಇನಿಂಗ್ಸ್‌ನಲ್ಲಿ ಆರು ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡ ಪ್ರವಾಸಿ ತಂಡದಿಂದ ಹೆಚ್ಚು ಪ್ರತಿರೋಧ ಕಂಡುಬರಲಿಲ್ಲ.

ಸ್ಟಾರ್ಕ್‌ 45 ರನ್‌ ನೀಡಿ ನಾಲ್ಕು ವಿಕೆಟ್‌ ಕಬಳಿಸಿದರೆ, ಲಯನ್‌ (63ಕ್ಕೆ 4) ಮಿಂಚಿದರು. ಕಮಿನ್ಸ್ ಎರಡು ವಿಕೆಟ್‌ ತಮ್ಮದಾಗಿಸಿಕೊಂಡರು.

1974ರಲ್ಲಿ ಆಕ್ಲೆಂಡ್‌ನಲ್ಲಿ ಆಸ್ಟ್ರೇಲಿಯಾ ಕಿವೀಸ್‌ ತಂಡಕ್ಕೆ 297 ರನ್‌ಗಳ ಸೋಲುಣಿಸಿತ್ತು.

 ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ 416 ಹಾಗೂ ಎರಡನೇ ಇನಿಂಗ್ಸ್ 217 ಡಿಕ್ಲೇರ್ಡ್‌. ನ್ಯೂಜಿಲೆಂಡ್‌ 166 ಹಾಗೂ ಎರಡನೇ ಇನಿಂಗ್ಸ್ 65.3 ಓವರ್‌ಗಳಲ್ಲಿ 171 (ಬಿ.ಜೆ.ವಾಟ್ಲಿಂಗ್‌ 40, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 33, ರಾಸ್‌ ಟೇಲರ್‌ 22, ಹೆನ್ರಿ ನಿಕೋಲ್ಸ್ 21; ಮಿಷೆಲ್‌ ಸ್ಟಾರ್ಕ್‌ 45ಕ್ಕೆ 4, ನೇಥನ್‌ ಲಯನ್‌ 63ಕ್ಕೆ 4, ಪ್ಯಾಟ್‌ ಕಮಿನ್ಸ್ 31ಕ್ಕೆ 2) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 296 ರನ್‌ ಜಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು