ಪ್ಯಾರಿಸ್(ಫ್ರಾನ್ಸ್): 2028ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆ ಕುರಿತಂತೆ ಪ್ರತಿಕ್ರಿಯಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಇದೊಂದು ಸಾಧಾರಣ ಬೆಳವಣಿಗೆ ಎಂದು ಹೇಳಿದ್ದಾರೆ.

ಡ್ರೀಮ್ ಸ್ಪೋರ್ಟ್ಸ್ ಏರ್ಪಡಿಸಿದ್ದ ’ಕ್ರಿಕೆಟ್ ಅಟ್ ದಿ ಒಲಿಂಪಿಕ್ಸ್–ಡಾನ್ ಆಫ್ ಎ ನ್ಯೂ ಎರಾ’ಎಂಬ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸುವ ನಿಟ್ಟಿನಲ್ಲಿ ‘ಇಂಡಿಯಾ ಹೌಸ್’ ಸ್ಥಾಪನೆ ಬಗ್ಗೆ ಪ್ರತಿಕ್ರಿಯಿಸಿದ ದ್ರಾವಿಡ್, ‘ನನ್ನಂತೆ ನೀವೂ ಸಹ ಕ್ರೀಡೆಯನ್ನು ಪ್ರೀತಿಸುವವರಾಗಿದ್ದರೆ, ನೀವು ಒಲಿಂಪಿಕ್ಸ್ ನೋಡಿಕೊಂಡೇ ಬೆಳೆದಿರುತ್ತೀರಿ. ನನ್ನ ಬಾಲ್ಯ ನೆನಪುಗಳನ್ನು ಹಂಚಿಕೊಳ್ಳುವುದಾದರೆ ಒಲಿಂಪಿಕ್ಸ್ನಲ್ಲಿ ಕಾರ್ಲ್ ಲೆವಿಸ್ ಅವರಂತಹ ಅದ್ಭುತ ಅಥ್ಲೀಟ್ಗಳ ಆಟ ಮತ್ತು ಅವರ ಗೆಲುವನ್ನು ಕಂಡಿದ್ದೇವೆ. ಇಂತಹ ಶ್ರೇಷ್ಠ ಆಟಗಾರರ ಆಟ ನೋಡಲು ಟಿ.ವಿಗೆ ಅಂಟಿಕೊಂಡು ಕೂತಿರುತ್ತಿದ್ದೆವು. ನಾವು ಒಂದು ಅದ್ಭುತ ಕ್ರೀಡಾಕೂಟದ ಭಾಗವಾಗಲು ಯಾವಾಗಲೂ ಬಯಸುತ್ತೇವೆ. ಕ್ರಿಕೆಟ್ನಲ್ಲಿ ಅಂತಹ ಅದ್ಭುತ ಕ್ರೀಡಾಕೂಟಗಳಿವೆ. ಆದರೆ, ಅವು ಒಂದೇ ಕ್ರೀಡೆಯ ಈವೆಂಟ್ಗಳಾಗಿವೆ. ಅತ್ಯಂತ ಉತ್ಸಾಹಭರಿತ ಒಲಿಂಪಿಕ್ಸ್ನಂತಹ ಕೂಟಗಳಲ್ಲಿ ಭಾಗವಹಿಸುವುದು ಒಬ್ಬ ಕ್ರೀಡಾಳುವಿನ ಕನಸು ನನಸಾದಂತೆ’ಎಂದು ದ್ರಾವಿಡ್ ಹೇಳಿದ್ದಾರೆ.

ಈ ಚರ್ಚಾ ಕಾರ್ಯಕ್ರಮದಲ್ಲಿ ಐಸಿಸಿ ಸಿಇಒ, ಜಿಯೋಫ್ ಅಲ್ಲಾರ್ಡಿಸ್, ಡ್ರೀಮ್ ಸ್ಫೋರ್ಟ್ಸ್ನ ಸಿಇಒ ಹರ್ಷ ಜೈನ್ ಸಹ ಇದ್ದರು.

ಈ ಕುರಿತಂತೆ ಮಾತನಾಡಿದ ಐಸಿಸಿ ಸಿಇಒ ಅಲ್ಲಾರ್ಡಿಸ್, ಟಿ–20 ವಿಶ್ವಕಪ್ನಲ್ಲಿ ಅಮೆರಿಕ ತಂಡದ ಪ್ರದರ್ಶನವನ್ನು ನೀವು ಗಮನಿಸಬಹುದು. ಕ್ರಿಕೆಟ್ ಬಗ್ಗೆ ಗೊತ್ತಿಲ್ಲದ ಜನರೂ ಸಹ ಇದ್ದಕ್ಕಿದ್ದಂತೆ ಯುಎಸ್ಎ ತಂಡದ ಪ್ರದರ್ಶನದ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಆಡುವ 4 ವರ್ಷಗಳ ಮುನ್ನವೇ ಅಮೆರಿಕ ಸ್ಪರ್ಧಾತ್ಮಕ ತಂಡ ಹೊಂದಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ’ಎಂದಿದ್ದಾರೆ.

ಬಹಳ ಸಮಯದ ಬಳಿಕ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಜೈನ್, ‘ಐಸಿಸಿಯಲ್ಲಿ ಸದ್ಯ 100ಕ್ಕೂ ಅಧಿಕ ಸದಸ್ಯರಿದ್ದಾರೆ. ಅರ್ಧ ಜಗತ್ತಿಗೂ ಅಧಿಕ ದೇಶಗಳಲ್ಲಿ ಕ್ರಿಕೆಟ್ ಆಡಲಾಗುತ್ತಿದೆ. ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆ ದೊಡ್ಡ ಗೆಲುವಾಗಿದ್ದು, ಮತ್ತೆ ನೂರಾರು ಕೋಟಿ ಜನ ಕ್ರಿಕೆಟ್ ನೋಡುತ್ತಾರೆ. ಹೂಡಿಕೆ ಹರಿದುಬರಲಿದೆ’ಎಂದಿದ್ದಾರೆ.

ಇದೇವೇಳೆ, ಅಮೆರಿಕದಲ್ಲಿ ಕ್ರಿಕೆಟ್ ಬಗ್ಗೆ ಅಪಾರ ಅಭಿಮಾನವಿದೆ ಎಂದು ದ್ರಾವಿಡ್ ಹೇಳಿದ್ದಾರೆ.

‘ಅಮೆರಿಕದಲ್ಲಿ ಕ್ರಿಕೆಟ್ಗೆ ಅದ್ಭುತವಾದ ಪ್ರೇಕ್ಷಕರಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗಳನ್ನು ನೋಡಲು ಸಾಕಷ್ಟು ಜನರು ಬೇರೆಡೆಗೆ ಪ್ರಯಾಣ ಬೆಳೆಸುತ್ತಾರೆ. ಈ ರೀತಿ ಕ್ರಿಕೆಟ್ ಬೆಳಯುತ್ತಿರುವುದು ಮತ್ತು ಇನ್ನಷ್ಟು ಜನ ಈ ಆಟದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅಭೂತಪೂರ್ವವಾದದ್ದು’ಎಂದು ದ್ರಾವಿಡ್ ಹೇಳಿದ್ದಾರೆ.

ಒಬ್ಬ ಕ್ರೀಡಾಭಿಮಾನಿಯಾಗಿ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಅನ್ನು ನೋಡಲು ಹಾತೊರೆಯುತ್ತಿದ್ದೇನೆ. ಕ್ರಿಕೆಟ್ ಆ ಕ್ರೀಡಾಕೂಟದ ಭಾಗವಾಗಬೇಕೆಂದು ಯಾವಾಗಲೂ ನನಗೆ ಅನಿಸುತ್ತಿತ್ತು. ಅದು ನಿಜಕ್ಕೂ ಅದ್ಭುತವಾದ ಕ್ರೀಡೆ. ವಿಶ್ವದಾದ್ಯಂತ ಬಹಳಷ್ಟು ಮಂದಿ ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ. ಹಾಗಾಗಿ, ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆ ಸಾಧಾರಣವಾದದ್ದು ಎಂದಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.