ಗುರುವಾರ , ಸೆಪ್ಟೆಂಬರ್ 29, 2022
28 °C

ಎಂಐ ಎಮಿರೇಟ್ಸ್‌ಗೆ ಶೇನ್‌ ಬಾಂಡ್‌ ಕೋಚ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ನ್ಯೂಜಿಲೆಂಡ್‌ನ ವೇಗದ ಬೌಲರ್‌ ಶೇನ್‌ ಬಾಂಡ್‌ ಅವರು ಇಂಟರ್‌ನ್ಯಾಷನಲ್‌ ಲೀಗ್‌ ಟಿ20 ಟೂರ್ನಿಯಲ್ಲಿ (ಐಎಲ್‌ ಟಿ20) ಪಾಲ್ಗೊಳ್ಳಲಿರುವ ಮುಂಬೈ ಇಂಡಿಯನ್ಸ್‌ ಎಮಿರೇಟ್ಸ್‌ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಬೌಲಿಂಗ್‌ ಕೋಚ್‌ ಆಗಿರುವ ಬಾಂಡ್‌ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಪಾರ್ಥಿವ್‌ ಪಟೇಲ್‌, ಕರ್ನಾಟಕದ ಆಟಗಾರ ವಿನಯ್‌ ಕುಮಾರ್‌ ಮತ್ತು ಜೇಮ್ಸ್‌ ಫ್ರಾಂಕ್ಲಿನ್‌ ಅವರನ್ನು ಕ್ರಮವಾಗಿ ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಆಗಿ ನೇಮಕ ಮಾಡಲಾಗಿದೆ.

ಭಾರತ ತಂಡದ ಮಾಜಿ ಆಲ್‌ರೌಂಡರ್‌ ರಾಬಿನ್‌ ಸಿಂಗ್‌ ಅವರು ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಚೊಚ್ಚಲ ಐಎಲ್‌ಟಿ20 ಟೂರ್ನಿ ಜನವರಿಯಲ್ಲಿ ಯುಎಇಯಲ್ಲಿ ನಡೆಯಲಿದ್ದು, ಆರು ತಂಡಗಳು ಪಾಲ್ಗೊಳ್ಳಲಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು