ಫೈನಲ್ ಪಂದ್ಯದಲ್ಲಿ ಒತ್ತಡವಿಲ್ಲದೆ ಆಡುತ್ತೇನೆ: ಆರ್ಚರ್

ಶುಕ್ರವಾರ, ಜೂಲೈ 19, 2019
24 °C

ಫೈನಲ್ ಪಂದ್ಯದಲ್ಲಿ ಒತ್ತಡವಿಲ್ಲದೆ ಆಡುತ್ತೇನೆ: ಆರ್ಚರ್

Published:
Updated:
Prajavani

ಬರ್ಮಿಂಗ್‌ಹ್ಯಾಂ: ತಂಡಕ್ಕೆ ಪದಾರ್ಪಣೆ ಮಾಡಿ ಎರಡು ತಿಂಗಳುಗಳಷ್ಟೇ ಆಗಿವೆ. ಅಷ್ಟರಲ್ಲಿ ಮಹತ್ವದ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ ಇಂಗ್ಲೆಂಡ್ ತಂಡದ ವೇಗದ ಬೌಲರ್‌ ಜೊಫ್ರಾ ಆರ್ಚರ್. ಆದರೂ ಫೈನಲ್ ಪಂದ್ಯದಲ್ಲಿ ಒತ್ತಡವಿಲ್ಲದೆ ಆಡುವುದಾಗಿ ಅವರು ಹೇಳಿದ್ದಾರೆ.‌

ಬಾರ್ಬಡೀಸ್‌ನಲ್ಲಿ ಜನಿಸಿದ ಜೊಫ್ರಾ ಅವರ ತಂದೆ ಇಂಗ್ಲೆಂಡ್‌ನವರು. ಮೊದ ಮೊದಲು ವೆಸ್ಟ್ ಇಂಡೀಸ್‌ನಲ್ಲಿ ಆಡುತ್ತಿದ್ದ ಅವರು ಈಚೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಸಂಸ್ಥೆಗೆ ಸೇರಿದ್ದರು. ಕಳೆದ ಮೇ ತಿಂಗಳಲ್ಲಿ ಇಂಗ್ಲೆಂಡ್ ಪರ ಮೊದಲ ಅಂತರರಾಷ್ಟ್ರೀಯ ಪಂದ್ಯ ಆಡಿದ್ದರು. 24 ವರ್ಷದ ಈ ಆಟಗಾರ ವಿಶ್ವಕಪ್‌ನಲ್ಲಿ 19 ವಿಕೆಟ್ ಪಡೆದು ಇಂಗ್ಲೆಂಡ್ ಪರ ದಾಖಲೆ ಬರೆದಿದ್ದಾರೆ.

ಗುರುವಾರ ಆಸ್ಟ್ರೇಲಿಯಾ ಎದುರು ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎಂಟು ವಿಕೆಟ್‌ಗಳಿಂದ ಗೆದ್ದಿತ್ತು. ಇದರಲ್ಲಿ ಆರ್ಚರ್ ಕಾಣಿಕೆ ಮಹತ್ವದ್ದಾಗಿತ್ತು. ಪಂದ್ಯದಲ್ಲಿ ತಾವು ಹಾಕಿದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ನಾಯಕ ಆ್ಯರನ್ ಫಿಂಚ್ ಅವರ ವಿಕೆಟ್ ಕಬಳಿಸಿದ್ದ ಆರ್ಚರ್ ನಂತರ ಅಪಾಯಕಾರಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನೂ ಬಲಿ ಪಡೆದಿದ್ದರು.

‘ಫೈನಲ್ ಪಂದ್ಯದ ಬಗ್ಗೆ ಯಾವುದೇ ಆತಂಕವಿಲ್ಲ. ತಾಳ್ಮೆಯಿಂದ ಆಡಿದರೆ ಮಾತ್ರ ಮಹತ್ವದ ಪಂದ್ಯಗಳಲ್ಲಿ ಗೆಲ್ಲಲು ಸಾಧ್ಯ. ಗಾಬರಿಯಾದರೆ ನಮ್ಮೊಳಗಿನ ಪ್ರತಿಭೆಯನ್ನು ಹೊರಗೆಡವಲು ಸಾಧ್ಯವಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತು. ಆದ್ದರಿಂದ ನಿರಾತಂಕವಾಗಿ ಆಡಲು ಬಯಸಿದ್ದೇನೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !