ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನ್ ಎದುರಿನ ಪಂದ್ಯದಲ್ಲಿ ಜೋರು ಮನವಿ; ವಿರಾಟ್‌ ಕೊಹ್ಲಿಗೆ ದಂಡ

ವಿಶ್ವಕಪ್‌ ಕ್ರಿಕೆಟ್‌
Last Updated 23 ಜೂನ್ 2019, 11:57 IST
ಅಕ್ಷರ ಗಾತ್ರ

ಸೌತಾಂಪ್ಟನ್‌: ಶನಿವಾರ ನಡೆದ ಭಾರತ–ಅಫ್ಗಾನಿಸ್ತಾನ ನಡುವಿನ ರೋಚಕ ಪಂದ್ಯದಲ್ಲಿ ಔಟ್‌ಗಾಗಿ ಅಂಪೈರ್‌ ಮುಂದೆ ಜೋರು ಮೊರೆಯಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಅವರ ಪಂದ್ಯದ ಗಳಿಕೆಯ ಶೇ 25ರಷ್ಟು ದಂಡ ವಿಧಿಸಿರುವುದಾಗಿ ಐಸಿಸಿ ಪ್ರಕಟಿಸಿದೆ.

ಜಸ್‌ಪ್ರಿತ್‌ ಬೂಮ್ರಾ ಎಸೆತದಲ್ಲಿ ಚೆಂಡು ರಹಮತ್‌ ಷಾ ಕಾಲಿನ ಪ್ಯಾಡ್‌ಗೆ ಬಡಿಯುತ್ತಿದ್ದಂತೆ ಭಾರತದ ಆಟಗಾರರು ಔಟ್‌ ನೀಡುವಂತೆ ಮನವಿ ಮಾಡಿದರು. ಎಲ್‌ಬಿಡಬ್ಲ್ಯು ಕೂಗಿಗೆ ಅಂಪೈರ್‌ ಔಟ್‌ ನೀಡಲಿಲ್ಲ. ಇದರಿಂದ ಬೇಸರಗೊಂಡ ವಿರಾಟ್‌ ಕೊಹ್ಲಿ, ಅಂಪೈರ್‌ನತ್ತ ನೋಡುತ್ತ ಅಸಮಾಧಾನ ಹೊರಹಾಕಿದರು.

’ಕೊಹ್ಲಿ ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದಾರೆ. ಅಫ್ಗಾನಿಸ್ತಾನ ಇನಿಂಗ್ಸ್‌ನ 29ನೇ ಓವರ್‌ನಲ್ಲಿ ಕೊಹ್ಲಿ, ಅಂಪೈರ್‌ ಅಲೀಮ್‌ ದರ್‌ ಅವರತ್ತ ಆಕ್ರಮಣಕಾರಿ ಭಾವವನ್ನು ವ್ಯಕ್ತಪಡಿಸಿದ್ದಾರೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೊಹ್ಲಿ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್‌ ರೆಫರಿ ಕ್ರಿಸ್‌ ಬ್ರಾಡ್‌ ಪ್ರಸ್ತಾಪಿಸಿರುವ ದಂಡನೆಗೆ ಸಮ್ಮತಿಸಿದ್ದಾರೆ. ಹಾಗಾಗಿ, ಅಧಿಕೃತ ವಿಚಾರಣೆಯ ಅಗತ್ಯವಿಲ್ಲ ಎಂದಿದೆ.

ಅಫ್ಘಾನಿಸ್ತಾನದ ಎದುರು ಭಾರತ 11 ರನ್‌ ಗೆಲುವು ಗಳಿಸಿತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT