ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಶಿರಸಿ ತಂಡಕ್ಕೆ ಪ್ರಶಸ್ತಿ

ಸೋಲಿನ ಭೀತಿಯಲ್ಲಿದ್ದ ತಂಡಕ್ಕೆ ಗೆಲುವಿನ ಸವಿ ಕೊಟ್ಟ ಅಕ್ರಮ್‌ ಬ್ಯಾಟಿಂಗ್‌
Last Updated 13 ಜನವರಿ 2021, 16:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊನೆಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಶಿರಸಿ ತಂಡ ಇಲ್ಲಿನ ಬಾಣಜಿ ಡಿ. ಕಿಮ್ಜಿ ಕ್ರೀಡಾಂಗಣದಲ್ಲಿ ನಡೆದವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂ.) ವ್ಯಾಪ್ತಿಯ ಅಂತರ ವಿಭಾಗೀಯ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಬುಧವಾರ ನಡೆದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ನಗರ ಬಿಆರ್‌ಟಿಎಸ್ ತಂಡ ನಿಗದಿತ 15 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 99 ರನ್‌ ಕಲೆಹಾಕಿತು. ಈ ಗುರಿಯನ್ನು ಶಿರಸಿಯ ತಂಡ 12.3 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಬಿಆರ್‌ಟಿಎಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸಂತೋಷ ಕಲಾನ್‌ ಮತ್ತು ನಂದನ್‌ ಕ್ರಮವಾಗಿ 0, 1 ರನ್‌ಗೆ ವಿಕೆಟ್‌ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸಂಜು (31), ಚಂದ್ರಶೇಖರ (40) ಜೊತೆಯಾಟವಾಡಿ ಅಲ್ಪ ಮೊತ್ತಕ್ಕೆ ಕುಸಿತದ ಭೀತಿಯಲ್ಲಿದ್ದ ತಂಡವನ್ನು ಪಾರು ಮಾಡಿದರು. ಶಿರಸಿ ತಂಡ ಕೂಡ ಆರಂಭದಲ್ಲಿ ಕಂಡಿದ್ದ ಹಿನ್ನಡೆಯಿಂದಾಗಿಸೋಲಿನ ಆತಂಕಕ್ಕೆ ಸಿಲುಕಿತ್ತು. ಈ ತಂಡದ ಸೈಯದ್‌, ಹುಸೇನ್‌ ಮಂಗಳಗೇರಿ, ಮಿಥುನ್‌, ಗಣೇಶ್ ಮತ್ತು ರಘು ಎರಡಂಕಿಯ ಮೊತ್ತಕ್ಕೆ ವಿಕೆಟ್‌ಗೆ ಒಪ್ಪಿಸಿದರು. ಇದರಿಂದಾಗಿ ಶಿರಸಿ ಕೇವಲ 13 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಅಕ್ರಮ್‌ (67, 32ಎಸೆತ, 4ಬೌಂಡರಿ, 6 ಸಿಕ್ಸರ್‌) ಅರ್ಧ ಶತಕಸಿಡಿಸಿ ಗೆಲುವಿನ ರೂವಾರಿಯಾದರು.

ಆರಂಭದಲ್ಲಿ ವಿಕೆಟ್‌ ಪಡೆದು ಗೆಲುವಿನ ಭರವಸೆ ಮೂಡಿಸಿದ್ದಬಿಆರ್‌ಟಿಎಸ್ ತಂಡದ ರಿಯಾಜ್‌ (2 ವಿಕೆಟ್‌) ಮತ್ತು ಫಕ್ಕಿರೇಶ್ (3 ವಿಕೆಟ್‌) ಅವರಿಗೆ ಕೊನೆಯಲ್ಲಿ ನಿರಾಸೆ ಕಾಡಿತು.ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಶಿರಸಿ ತಂಡ ಹಾವೇರಿ ಮೇಲೂ, ಬಿಆರ್‌ಟಿಎಸ್‌ ತಂಡ ಬಾಗಲಕೋಟೆ ವಿರುದ್ಧವು ಗೆಲುವು ಸಾಧಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದವು. ಎರಡು ದಿನ ನಡೆದ ಟೂರ್ನಿಯಲ್ಲಿ 12 ತಂಡಗಳು ಪೈಪೋಟಿ ನಡೆಸಿದ್ದವು.

ಮುಖ್ಯ ಮೆಕಾನಿಕಲ್‌ ಎಂಜಿನಿಯರ್‌ ರಮೇಶ, ಮುಖ್ಯ ಭದ್ರತಾ ಅಧಿಕಾರಿ ರಾಜೇಶ ಹುದ್ದಾರ, ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ನ ಕಾರ್ಯದರ್ಶಿ ಆರ್‌.ಎಫ್‌. ಕೌಳಿಕಾಯಿ, ಕ್ರೀಡಾ ಸಮಿತಿ ಸದಸ್ಯ ಪಿ. ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT