ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ವಿಜಯಪುರದ ರಾಜೇಶ್ವರಿಗೆ ಸ್ಥಾನ

Last Updated 9 ಫೆಬ್ರುವರಿ 2019, 18:32 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 18ರಂದು ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ನಡೆಯಲಿರುವ ಮೂರು ಏಕದಿನ ಕ್ರಿಕೆಟ್ ಪಂದ್ಯಗಳ ಟೂರ್ನಿಯಲ್ಲಿ ಆಡಲಿರುವ ಆತಿಥೇಯರ ಭಾರತ ತಂಡದಲ್ಲಿ ವಿಜಯಪುರದ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್ ಸ್ಥಾನ ಗಳಿಸಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ಮತ್ತು ಟ್ವೆಂಟಿ–20 ಸರಣಿಯಲ್ಲಿ ರಾಜೇಶ್ವರಿ ಆಡಿರಲಿಲ್ಲ. ಮಿಥಾಲಿ ರಾಜ್ ನಾಯಕತ್ವದ ತಂಡವನ್ನು ಶನಿವಾರ ಬಿಸಿಸಿಐ ಪ್ರಕಟಿಸಿದೆ. ಮೂರು ಏಕದಿನ ಪಂದ್ಯಗಳು ನಡೆಯಲಿವೆ. 18ರಂದು ಮುಂಬೈನಲ್ಲಿ ನಡೆಯಲಿರುವ ಆಭ್ಯಾಸ ಪಂದ್ಯದಲ್ಲಿ ಆಡಲಿರುವ ಮಂಡಳಿ ಅಧ್ಯಕ್ಷರ ಇಲೆವನ್ ತಂಡವನ್ನು ಸ್ಮೃತಿ ಮಂದಾನ ಮುನ್ನಡೆಸುವರು. ಈ ತಂಡದಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ ಇದ್ದಾರೆ.

ಎಲ್ಲ ಏಕದಿನ ಪಂದ್ಯಗಳೂ ಮುಂಬೈನಲ್ಲಿಯೇ ನಡೆಯಲಿವೆ. ಫೆ 22. 25 ಮತ್ತು 28ರಂದು ಪಂದ್ಯಗಳನ್ನು ಆಯೋಜಿಸಲಾಗಿದೆ.

ತಂಡ ಇಂತಿದೆ

ಏಕದಿನ ಟೂರ್ನಿ: ಮಿಥಾಲಿ ರಾಜ್ (ನಾಯಕಿ), ಜೂಲನ್ ಗೋಸ್ವಾಮಿ, ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿಕೆಟ್‌ಕೀಪರ್), ಆರ್. ಕಲ್ಪನಾ (ವಿಕೆಟ್‌ಕೀಪರ್), ಮೋನಾ ಮೆಷ್ರಮ್, ಏಕ್ತಾ ಬಿಷ್ಠ್, ರಾಜೇಶ್ವರಿ ಗಾಯಕವಾಡ್, ಪೂನಂ ಯಾದವ್, ಶಿಖಾ ಪಾಂಡೆ, ಮಾನಸಿ ಜೋಶಿ, ಪೂನಮ್ ರಾವುತ್.

ಮಂಡಳಿ ಅಧ್ಯಕ್ಷರ ಇಲೆವನ್: ಸ್ಮೃತಿ ಮಂದಾನ (ನಾಯಕಿ), ವೇದಾ ಕೃಷ್ಣಮೂರ್ತಿ, ದೇವಿಕಾ ವೈದ್ಯ, ಎಸ್. ಮೇಘನಾ, ಭಾರತಿ ಫೂಲ್‌ಮಾಲಿ, ಕೋಮಲ್ ಝಾಂಜಡ್, ಆರ್. ಕಲ್ಮನಾ, ಪ್ರಿಯಾ ಪೂನಿಯಾ, ಹರ್ಲೀನ್ ಡಿಯೊಲ್, ರೀಮಾಲಕ್ಷ್ಮೀ ಎಕ್ಕಾ, ಮನಾಲಿ ದಕ್ಷಿಣಿ, ಮಿನು ಮಣಿ, ತನುಜಾ ಕನ್ವರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT