ಭಾನುವಾರ, ಆಗಸ್ಟ್ 14, 2022
20 °C

ಕ್ರಿಕೆಟ್: ಶುಭಮನ್ ಗಿಲ್ ಅರ್ಧಶತಕ; ಪಂದ್ಯ ಡ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೆಸ್ಟರ್‌ಷೈರ್: ಶುಭಮನ್ ಗಿಲ್ ಮತ್ತು ಲೂಯಿಸ್ ಕಿಂಬರ್ ಅವರ ಅರ್ಧಶತಕಗಳ ಬಲದಿಂದ ಲೆಸ್ಟರ್‌ಷೈರ್ ತಂಡವು ಭಾರತದ ಎದುರಿನ ಅಭ್ಯಾಸ ಪಂದ್ಯದಲ್ಲಿ ಡ್ರಾ ಸಾಧಿಸಿತು. 

367 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ್ದ ತಂಡವು ಕೊನೆಯ ದಿನದಾಟದ ಮುಕ್ತಾಯಕ್ಕೆ 66 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 219 ರನ್ ಗಳಿಸಿತು. ಗಿಲ್ (62; 77ಎ, 4X8, 6X2) ಮತ್ತು ಲೂಯಿಸ್ (58; 86ಎ, 4X10) ಅವರು ತಂಡದ ಕುಸಿತಕ್ಕೆ ತಡೆಯೊಡ್ಡಿ ಸೋಲು ತಪ್ಪಿಸಿದರು. 

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಭಾರತ 8ಕ್ಕೆ246, ಲೆಸ್ಟರ್‌ಷೈರ್‌ 244, ಎರಡನೇ ಇನಿಂಗ್ಸ್ ಭಾರತ 9ಕ್ಕೆ364 ಡಿಕ್ಲೆರ್, ಲೆಸ್ಟರ್‌ಷೈರ್: 4ಕ್ಕೆ219 (ಶುಭಮನ್ ಗಿಲ್ 62, ಸ್ಯಾಮ್ ಇವಾನ್ಸ್ 26, ಹನುಮವಿಹಾರಿ 26, ಲೂಯಿಸ್ ಕಿಂಬರ್ 58, ಆರ್. ಅಶ್ವಿನ್ 31ಕ್ಕೆ2) ಫಲಿತಾಂಶ: ಡ್ರಾ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.