ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ದೀಪಕ್‌ ಚಾಹರ್‌, ಜಯಾ ಭಾರದ್ವಾಜ್‌

Last Updated 2 ಜೂನ್ 2022, 7:48 IST
ಅಕ್ಷರ ಗಾತ್ರ

ಆಗ್ರಾ: ಭಾರತ ಕ್ರಿಕೆಟ್‌ತಂಡದ ಆಟಗಾರ ದೀಪಕ್‌ ಚಾಹರ್‌ತಮ್ಮ ಬಹುಕಾಲದ ಗೆಳತಿ ಜಯಾ ಭಾರದ್ವಾಜ್‌ ಅವರನ್ನು ವಿವಾಹವಾಗಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಅದ್ದೂರಿ ವಿವಾಹಕ್ಕೆ ಕ್ರಿಕೆಟ್‌ ತಾರೆಗಳು, ಸ್ಥಳೀಯ ರಾಜಕಾರಣಿಗಳು, ಸಿನಿಮಾರಂಗದ ಗಣ್ಯರು, ಕುಟುಂಬದವರು ಮತ್ತು ಆಪ್ತರು ಭಾಗವಹಿಸಿದ್ದರು. ಸಹೋದರ ರಾಹುಲ್‌ ಚಾಹರ್‌ ಅವರು ಈ ಮದುವೆಯ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ದೀಪಕ್ ಬಿಳಿ ಶೆರ್ವಾನಿ ಮತ್ತು ಪೇಟವನ್ನು ಧರಿಸಿದ್ದರೆ, ಜಯಾಕ್ರೀಮ್ ಬಣ್ಣದ ಲೆಹೆಂಗಾ ತೊಟ್ಟು ಹಸೆಮಣೆ ಏರಿದ್ದರು. ಎರಡು ಕುಟುಂಬಗಳ ಸಂಪ್ರದಾಯದಂತೆಮದುವೆ ನಡೆಯಿತು.

ಕಳೆದ ವರ್ಷ ಐಪಿಎಲ್‌ ಪಂದ್ಯದ ವೇಳೆ, ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಾಹರ್ ಗೆಳತಿ ಜಯಾ ಭಾರದ್ವಾಜ್‌ ಅವರಿಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಎಲ್ಲರೆದುರೇ ಪ್ರೇಮ ನಿವೇದನೆ ಮಾಡಿದ್ದರು.

ಜಯಾ ಅವರು ನಟ ಮತ್ತು ಬಿಗ್‌ಬಾಸ್‌ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ. ದೆಹಲಿಯವರಾದ ಜಯಾ, ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT