7
ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್‌ ಸರಣಿ

ಕೊಹ್ಲಿ ಈ ಬಾರಿ ಶತಕ ಗಳಿಸುವುದಿಲ್ಲ: ಪ್ಯಾಟ್‌ ಕಮಿನ್ಸ್‌

Published:
Updated:
ಪ್ಯಾಟ್‌ ಕಮಿನ್ಸ್‌ 

ಸಿಡ್ನಿ: ‘ಇದೇ ವರ್ಷದ ಕೊನೆಯಲ್ಲಿ ನಡೆಯಲಿರುವ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಶತಕ ಗಳಿಸುವುದಿಲ್ಲ’ ಎಂದು ಆಸ್ಟ್ರೇಲಿಯಾ ತಂಡದ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ ಹೇಳಿದ್ದಾರೆ. 

ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆಡಲು ನವೆಂಬರ್ ತಿಂಗಳಲ್ಲಿ ಭಾರತ ತಂಡವು ಆಸ್ಟ್ರೇಲಿಯಾಗೆ ತೆರಳಲಿದೆ. 

ಇಲ್ಲಿನ ಚಾನೆಲ್‌ 7 ಎಂಬ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಕಮಿನ್ಸ್‌, ‘ತುಂಬ ಧೈರ್ಯದಿಂದ ಇದನ್ನು ಹೇಳುತ್ತಿದ್ದೇನೆ. ಈ ಸಲದ ಟೆಸ್ಟ್‌ ಪಂದ್ಯಗಳಲ್ಲಿ ಒಂದರಲ್ಲೂ ವಿರಾಟ್‌ ಶತಕ ಗಳಿಸದಂತೆ ಅವರನ್ನು ಕಟ್ಟಿಹಾಕಲಿದ್ದೇವೆ’ ಎಂದು ಹೇಳಿದ್ದಾರೆ. 

ಆಸ್ಟ್ರೇಲಿಯಾದ ನೆಲದಲ್ಲಿ ಆಡಿರುವ ಎಂಟು ಟೆಸ್ಟ್‌ ಪಂದ್ಯಗಳಲ್ಲಿ ಕೊಹ್ಲಿ ಶೇ 62ರ ಸರಾಸರಿ ಹೊಂದಿದ್ದಾರೆ. ಒಟ್ಟು ಐದು ಶತಕಗಳನ್ನು ಗಳಿಸಿದ್ದಾರೆ. 

ಇದೇ ವೇಳೆ ಕಮಿನ್ಸ್‌ ಅವರೊಂದಿಗಿದ್ದ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಗ್ಲೇನ್‌ ಮೆಕ್‌ಗ್ರಾ, ‘ಆ ಸರಣಿಯನ್ನು ಆಸ್ಟ್ರೇಲಿಯಾ 4–0ಯಿಂದ ಗೆಲ್ಲಲಿದೆ. ತಂಡದ ಆಟಗಾರರು ಕೊಹ್ಲಿ ಅವರ ಮೇಲೆ ಹೆಚ್ಚು ಒತ್ತಡ ಹಾಕಬೇಕು. ಅದನ್ನು ಕೊಹ್ಲಿ ಯಾವ ರೀತಿ ನಿರ್ವಹಿಸಲಿದ್ದಾರೆ ಎಂಬುದನ್ನು ನೋಡಬೇಕಿದೆ’ ಎಂದು ಹೇಳಿದ್ದಾರೆ. 

‘70 ಮತ್ತು 80ರ ದಶಕದಲ್ಲಿ ವೆಸ್ಟ್‌ಇಂಡೀಸ್‌ ತಂಡವು ಎದುರಾಳಿ ತಂಡದ ನಾಯಕನ ಮೇಲೆ ಹೆಚ್ಚು ಒತ್ತಡ ಬೀಳುವಂತೆ ನೋಡಿಕೊಳ್ಳುತ್ತಿದ್ದರು. ನಾನು ಕೂಡ ಎದುರಾಳಿ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಅನ್ನು ಗುರಿ ಮಾಡುತ್ತಿದ್ದೆ. ಈ ರೀತಿ ಮಾಡಿದಾಗ ಪಂದ್ಯ ಗೆಲ್ಲುವುದು ಸುಲಭವಾಗುತ್ತದೆ’ ಎಂದು ಹೇಳಿದ್ದಾರೆ.

ಇಲ್ಲಿಯವರೆಗೂ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಒಟ್ಟು 44 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು ಕೇವಲ ಐದರಲ್ಲಿ ಗೆದ್ದಿದೆ. 

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 3

  Frustrated
 • 0

  Angry

Comments:

0 comments

Write the first review for this !