ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ನೇ ಮಹಡಿಯ ಬಾಲ್ಕನಿಯಲ್ಲಿ ನೇತಾಡಿದ್ದೆ: ಯಜುವೇಂದ್ರ ಚಾಹಲ್

ಜೀವಕ್ಕೆ ಕುತ್ತು ತಂದಿದ್ದ ಘಟನೆಯನ್ನು ನೆನಪಿಸಿಕೊಂಡ ಯಜುವೇಂದ್ರ ಚಾಹಲ್
Last Updated 8 ಏಪ್ರಿಲ್ 2022, 16:29 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಒಂಬತ್ತು ವರ್ಷಗಳ ಹಿಂದೆ ತಾವು ಸಾವಿನ ಆತಂಕ ಎದುರಿಸಿ ಪಾರಾಗಿ ಬಂದ ಘಟನೆಯೊಂದನ್ನು ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಬಹಿರಂಗಪಡಿಸಿದ್ದಾರೆ.

'ಅಂದು ನಡೆದ ಕಥೆ ಕೆಲವರಿಗೆ ಮಾತ್ರ ಗೊತ್ತು. 2013ರ ಐಪಿಎಲ್‌ನಲ್ಲಿ ನಾನು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದೆ. ಬೆಂಗಳೂರಿನಲ್ಲಿ ಪಂದ್ಯ ಮುಗಿದ ನಂತರ ಇದ್ದ ಔತಣಕೂಟದಲ್ಲಿ ನಾವೆಲ್ಲರೂ ಸೇರಿದ್ದೆವು. ಆಗ ಮುಂಬೈ ತಂಡದಲ್ಲಿದ್ದ ಆಟಗಾರನೊಬ್ಬ ಕಂಠಪೂರ್ತಿ ಮದ್ಯಪಾನ ಮಾಡಿದ್ದ. ಆತನ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಆತ ನನ್ನನ್ನು ಬಾಲ್ಕನಿಯತ್ತ ಕರೆದುಕೊಂಡು ಹೋದ. 15ನೇ ಮಹಡಿಯ ಆ ಬಾಲ್ಕನಿಯಲ್ಲಿ ನಾನು ನೇತಾಡುವಂತೆ ಮಾಡಿದ.

ಆ ಸಂದರ್ಭದಲ್ಲಿ ನಾನು ಆತನ ಕೊರಳಿಗೆ ಕೈಬಳಸಿ ಗಟ್ಟಿಯಾಗಿ ಹಿಡಿದಿದ್ದೆ. ಆದ್ದರಿಂದ ಅನಾಹುತವಾಗಲಿಲ್ಲ. ಸ್ವಲ್ಪ ಎಚ್ಚರ ತಪ್ಪಿದ್ದರೂ ನನ್ನ ಕತೆ ಮುಗಿದಿತ್ತು’ ಎಂದು ಚಾಹಲ್ ರಾಜಸ್ಥಾನ ರಾಯಲ್ಸ್ ತಂಡದ ಯೂಟ್ಯೂಬ್ ವಾಹಿನಿಯ ’ಕಮ್‌ಬ್ಯಾಕ್ ಸ್ಟೋರೀಸ್‌’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಆರ್. ಅಶ್ವಿನ್ ಮತ್ತು ಕರುಣ್ ನಾಯರ್ ಕೂಡ ಭಾಗವಹಿಸಿದ್ದರು.

‘ಅಂದು ಆ ಘಟನೆಯಿಂದಾಗಿ ನಾನು ಅರೆಪ್ರಜ್ಞಾವಸ್ಥೆಗೊಳಗಾದೆ. ಅಲ್ಲಿದ್ದ ಕೆಲವರು ಧಾವಿಸಿ ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು. ನನಗೆ ನೀರು ಕೊಟ್ಟು ಉಪಚರಿಸಿದರು. ಎಲ್ಲಾದರೂ ಹೊರಗಡೆ ಹೋದಾಗ ನಾವೆಷ್ಟು ಎಚ್ಚರಿಕೆಯಿಂದ ಇರಬೇಕೆಂಬುದರ ಅರಿವು ನನಗಾಯಿತು. ಸಣ್ಣ ತಪ್ಪು ಕೂಡ ಜೀವಕ್ಕೆ ಕುತ್ತು ತರಬಹುದು’ ಎಂದರು.

ಈ ವರ್ಷ ಚಾಹಲ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. 2013ರಲ್ಲಿ ಅವರು ಮುಂಬೈ ತಂಡದಲ್ಲಿ ಒಂದು ಪಂದ್ಯ ಆಡಿದ್ದರು. ಅದರ ನಂತರ ಏಳು ವರ್ಷ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಗದಲ್ಲಿ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT