ಶನಿವಾರ, ಜನವರಿ 25, 2020
19 °C
ಜನವರಿ 14ರಿಂದ ಏಕದಿನ ಸರಣಿ

ಕ್ರಿಕೆಟ್ | ಭಾರತ ಪ್ರವಾಸಕ್ಕೆ ಆಸೀಸ್‌ ತಂಡ: ಗಾಯಾಳು ಅಬೋಟ್‌ ಬದಲು ಶಾರ್ಟ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: ಪಕ್ಕೆಲುಬಿನ ನೋವಿನಿಂದ ಬಳಲುತ್ತಿರುವ ಸಿಯಾನ್‌ ಅಬೋಟ್‌ ಅವರನ್ನು ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ತಂಡದಿಂದ ಕೈಬಿಡಲಾಗಿದೆ. ಏಕದಿನ ಕ್ರಿಕೆಟ್ ಸರಣಿ ಆಡುವ ಈ ತಂಡದಲ್ಲಿ ಅಬೋಟ್‌ ಬದಲು ಡಿ’ಆರ್ಸಿ ಶಾರ್ಟ್‌ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಸರಣಿಯ ಮೊದಲ ಪಂದ್ಯ ಜನವರಿ 14ರಂದು ಮುಂಬೈನಲ್ಲಿ ನಡೆಯಲಿದೆ. ಆಲ್‌ರೌಂಡರ್‌ ಶಾರ್ಟ್‌ ಅವರು ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಾಗಿದ್ದಾರೆ ಎಂದು ರಾಷ್ಟ್ರೀಯ ಆಯ್ಕೆಗಾರ ಟ್ರೆವರ್‌ ಹಾನ್ಸ್‌ ಸೋಮವಾರ ತಿಳಿಸಿದರು.

ಆಸ್ಟನ್‌ ಅಗರ್‌ ಅವರ ಜೊತೆ ಡಿ’ಆರ್ಸಿ ಆಯ್ಕೆ ಮೂಲಕ ತಂಡಕ್ಕೆ ಇನ್ನೊಬ್ಬ ಸ್ಪಿನ್‌ ಆಲ್‌ರೌಂಡರ್‌ ಅಯ್ಕೆ ಮಾಡಿಕೊಳ್ಳುವ ಅವಕಾಶ ಲಭ್ಯವಾಗಿದೆ. ತಂಡದಲ್ಲಿ ವಿಶ್ವ ದರ್ಜೆಯ ನಾಲ್ವರು ವೇಗದ ಬೌಲರ್‌ಗಳಿದ್ದಾರೆ ಎಂದು ಅವರು ಹೇಳಿದರು.

ಐದು ವರ್ಷಗಳ ನಂತರ ತಂಡಕ್ಕೆ ಅಬೋಟ್‌ ಅವರನ್ನು ಕರೆಸಿಕೊಳ್ಳಲಾಗಿತ್ತು. ಆದರೆ ಕಳೆದ ಶುಕ್ರವಾರ ಬಿಗ್‌ ಬ್ಯಾಷ್‌ ಲೀಗ್‌ ವೇಳೆ ಅವರು ಗಾಯಾಳಾದರು.

ಆಸ್ಟ್ರೇಲಿಯಾ ತಂಡ: ಆರನ್ ಫಿಂಚ್‌ (ಕ್ಯಾಪ್ಟನ್‌), ಆಸ್ಟನ್‌ ಅಗರ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಪೀಟರ್‌ ಹ್ಯಾಂಡ್ಸ್‌ಕೊಮ್‌, ಜೋಸ್‌ ಹೇಜಲ್‌ವುಡ್‌, ಮಾರ್ನಸ್‌ ಲಾಬುಶೇನ್‌, ಕೇನ್‌ ರಿಚರ್ಡ್‌ಸನ್‌, ಡಿ’ಆರ್ಸಿ ಶಾರ್ಟ್‌, ಸ್ಟೀವ್‌ ಸ್ಮಿತ್‌, ಮಿಷೆಲ್‌ ಸ್ಟಾರ್ಕ್‌, ಆಷ್ಟನ್‌ ಟರ್ನರ್‌, ಡೇವಿಡ್‌ ವಾರ್ನರ್‌, ಆ್ಯಡಮ್‌ ಜಂಪಾ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು