ಶನಿವಾರ, ಆಗಸ್ಟ್ 20, 2022
22 °C

ಸಂಸ್ಥೆಯ ಉದ್ಯೋಗಿಗೆ ಕೋವಿಡ್–19‌: ಡಿಡಿಸಿಎ ಕಚೇರಿ ಬಂದ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದ ಆವರಣದಲ್ಲಿರುವ ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ(ಡಿಡಿಸಿಎ) ಕಚೇರಿಯನ್ನು ಬಂದ್‌ ಮಾಡಲಾಗಿದೆ. ಈ ಉದ್ಯೋಗಿಯು ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರ ತರದೇ ಕೆಲಸಕ್ಕೆ ಹಾಜರಾಗಿದ್ದರು ಎಂದು ವರದಿಯಾಗಿದೆ.

ಸೋಂಕಿತ ಉದ್ಯೋಗಿಯ ಸಂಪರ್ಕಕ್ಕೆ ಬಂದಿರಬಹುದಾದ ಹಲವು ನೌಕರರು ಕ್ವಾರಂಟೈನ್‌ಗೆ ಒಳಗಾಗಬೇಕಿದ್ದು, ಮುಂದಿನ ಸೂಚನೆಯವರೆಗೆ ಕೋಟ್ಲಾ ಕಚೇರಿಯನ್ನು ಮುಚ್ಚುವಂತೆ ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್‌ ಮಂಚಂಡ ಅವರು ಸೂಚಿಸಿದ್ದಾರೆ. 

‘ಡಿಡಿಸಿಎಯಲ್ಲಿ ಉದ್ಯೋಗಿಯೊಬ್ಬರಿಗೆ ಕೋವಿಡ್‌ ಸೋಂಕು ಪತ್ತೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದಿನ ಆದೇಶದವರೆಗೆ ಕ್ಲಬ್‌ಅನ್ನು ಈ ಕೂಡಲೇ ಬಂದ್‌ ಮಾಡಬೇಕು. ಸಂಪೂರ್ಣ ಕ್ಲಬ್‌ ಆವರಣವನ್ನು ಸಾಧ್ಯವಾದಷ್ಟು ಬೇಗ ಸ್ಯಾನಿಟೈಜ್ ಮಾಡಬೇಕು‘ ಎಂದು ಮಂಚಂಡ ಅವರು ಆಡಳಿತ ವ್ಯವಸ್ಥಾಪಕ ನೀರಜ್‌ ಶರ್ಮಾ ಅವರಿಗೆ ಕಳುಹಿಸಿದ ಇ–ಮೇಲ್‌ನಲ್ಲಿ ಸೂಚಿಸಿದ್ದಾರೆ.

‘ಕೋವಿಡ್‌–19 ಸೋಂಕು ಇಲ್ಲ ಎಂಬ ಪರೀಕ್ಷಾ ಪ್ರಮಾಣಪತ್ರ ತಂದು ಕೆಲಸಕ್ಕೆ ಹಾಜರಾಗಬೇಕು ಎಂದು ಸೂಚಿಸಿದ್ದರೂ, ನಿಯಮಗಳನ್ನು ಉಲ್ಲಂಘಿಸಲಾಗಿದೆ. ಸೋಂಕಿತ ವ್ಯಕ್ತಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗುವುದು ಎಂದು ಮಂಚಂಡ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು